Song: Sariyaagi nenapide nanage(ಸರಿಯಾಗಿ ನೆನಪಿದೆ ನನಗೆ), Movie: Mungaru MaLe (ಮುಂಗಾರು ಮಳೆ-೨)

ಹಾಡು: ಸರಿಯಾಗಿ ನೆನಪಿದೆ ನನಗೆ
ರಚನೆ: ಜಯಂತ್‌ ಕಾಯ್ಕಿಣಿ
ಸಂಗೀತ: ಅರ್ಜುನ್‌ ಜನ್ಯ
ಗಾಯನ: ಅರ್ಮಾನ್‌ ಮಲಿಕ್‌
ಚಲನಚಿತ್ರ: ಮುಂಗಾರು ಮಳೆ-೨

ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ

ಮನದ ಪ್ರತಿ ಗಲ್ಲಿಯೊಳಗು
ನಿನದೇ ಮೆರವಣಿಗೆ

ಕನಸಿನ ಕುಲುಮೆಗೆ, ಉಸಿರನು ಊದುತ
ಕಿಡಿ ಹಾರುವುದು ಇನ್ನು ಖಚಿತ 

ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ

ಕಣ್ಣಲ್ಲೇ ಇದೆ, ಎಲ್ಲ ಕಾಗದ
ನೀನೇ ನನ್ನಯ ಅಂಚೆ ಪೆಟ್ಟಿಗೆ
ಏನೇ ಕಂಡರೂ ನೀನೇ ಜ್ನಾಪಕ
ನೀನೇ ಔಷಧಿ, ನನ್ನ ಹುಚ್ಚಿಗೆ

ತೆರೆದು ನೀನು ಮುದ್ದಾದ ಅಧ್ಯಾಯ
ಸಿಗದೆ ಇದ್ರೆ ತುಂಬಾನೇ ಅನ್ಯಾಯ

ನನ್ನಯ ನಡೆನುಡಿ, ನಿನ್ನನೇ ಬಯಸುತ
ಬದಲಾಗುವುದು ಇನ್ನು ಖಚಿತ

ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ

ನಿನ್ನ ನೃತ್ಯಕೆ ಸಿದ್ಧವಾಗಿದೆ
ಅಂತರಂಗದ ರಂಗಸಜ್ಜಿಕೆ
ನಿನ್ನ ನೋಡದ ನನ್ನ ಜೀವನ
ಸುದ್ದಿ ಇಲ್ಲದ ಸುದ್ದಿಪತ್ರಿಕೆ

ಸೆರೆಸಿಕ್ಕಾಗ ಬೇಕಿಲ್ಲ ಜಾಮೀನು
ಸರಸಕ್ಕೀಗ ನಿಂದೇನೆ ಕಾನೂನು

ಕೊರೆಯುವ ನೆನಪಲಿ, ಇರುಳನು ಕಳೆಯುತ 
ಬೆಳಗಾಗುವುದು ಇನ್ನು ಖಚಿತ

ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)