Song: Eega thaane jaariyaagide (ಈಗ ತಾನೆ ಜಾರಿಯಾಗಿದೆ) Movie: Ananthu v/s Nusrath (ಅನಂತು ವರ್ಸಸ್‌ ನುಸ್ರತ್‌)

ಹಾಡು: ಈಗ ತಾನೆ ಜಾರಿಯಾಗಿದೆ
ರಚನೆ: ಸಿದ್ದು ಕೋಡಿಪುರ
ಸಂಗೀತ: ಸುನಾದ್‌ ಗೌತಮ್‌
ಗಾಯನ: ವಿಜಯ್‌ ಪ್ರಕಾಶ್‌
ಚಲನಚಿತ್ರ: ಅನಂತು ವರ್ಸಸ್‌ ನುಸ್ರತ್‌


ಈಗ ತಾನೆ ಜಾರಿಯಾಗಿದೆ ಹೊಸ
ಮುದ್ದಾದ ಕಾನೂನು
ವಿಚಾರಣೆಯ ಹಂತ ತಲುಪಲು ಸದಾ
ಆರೋಪಿ ನಾನಿನ್ನು


ಅರಿವಿಲ್ಲದೆ ಈಗ ಪ್ರೀತಿಯಾಗಿದೆ
ವಿಚಾರಿಸಿ ನೀ ಮಾತನಾಲಿಸು


ಪೂರ್ವಾಪರ ನನ್ನ ವಿಷಯ ಕೇಳದೆ
ಪ್ರತಿ ದಿನ ನೀ ವಾದಮಂಡಿಸು


ಈಗ ತಾನೆ ಜಾರಿಯಾಗಿದೆ ಹೊಸ
ಮುದ್ದಾದ ಕಾನೂನು
ವಿಚಾರಣೆಯ ಹಂತ ತಲುಪಲು ಸದಾ
ಆರೋಪಿ ನಾನಿನ್ನು


ಮುಂದೂಡಲಾಗೊದಿಲ್ಲ ಈ ಘಳಿಗೆ
ಕರಾರು ಮಾಡಿಕೊಡು ಆ ಬೆಲೆಗೆ


ನಾನಾಗೆ ಕಾದು ಕುಂತೆ ನಿನ ದಾರಿ
ಅದಕಾಗಿ ಆಗು ನೀನು ಆಭಾರಿ


ತೆರೆದಿದೆ ಮನ ಮಾಡು ದಾಖಲಾತಿಯ
ಒಂದೇ ಸಲ ನೀಡು ಮೀಸಲಾತಿಯ


ತಿಳಿಯಿತೇ ಇದು ನಮ್ಮ ಪ್ರೇಮ ಪ್ರಕರಣ
ಈಗ ಹೇಳು ನೀ ಯಾರು ಕಾರಣ


ಈಗ ತಾನೆ ಜಾರಿಯಾಗಿದೆ ಹೊಸ
ನವಿರಾದ ಕಾನೂನು
ವಿಚಾರಣೆಯ ಹಂತ ತಲುಪಲು ಸದಾ
ಆರೋಪಿ ನಾನಿನ್ನು


ಒಂದೊಂದು ಮಾತಿನಲ್ಲು ಇದೆ ಬೆಸುಗೆ
ನೀ ತಾನೆ ನೀಡಬೇಕು ಆ ಸಲಿಗೆ


ನಿನ್ನನ್ನು ಕಾಣಲೆಂದು ಇದೆ ದಾರಿ
ಜಾಮೀನು ಕೇಳಿ ಬರುವೆ ಪ್ರತಿಬಾರಿ


ಬಯಸಿದೆ ಮನ ಒಮ್ಮೆ ಹಾಜರಾತಿಯ
ಆದರೂ ಕೊಡು ನಂಗು ಮೀಸಲಾತಿಯ


ಗಮನಿಸು ನೀ ನನ್ನ ಸಣ್ಣ ಮನವಿಯ
ಕರುಣಿಸಿ ಕೊಡು ಒಲವ ಪ್ರೇಮ ಪದವಿಯ


ಈಗ ತಾನೆ ಜಾರಿಯಾಗಿದೆ ಹೊಸ
ಮುದ್ದಾದ ಕಾನೂನು
ವಿಚಾರಣೆಯ ಹಂತ ತಲುಪಲು ಸದಾ
ಆರೋಪಿ ನಾನಿನ್ನು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)