Song: Neelaakaasha kelu(ನೀಲಾಕಾಶ ಕೇಳು). Movie: Saarvajanikarige suvarnaavakaasha( ಸಾರ್ವಜನಿಕರಿಗೆ ಸುವರ್ಣಾವಕಾಶ)

ಹಾಡು: ನೀಲಾಕಾಶ ಕೇಳು
ರಚನೆ: ಅನೂಪ್‌ ರಾಮಸ್ವಾಮಿ ಕಶ್ಯಪ್‌
ಸಂಗೀತ: ಮಿಧುನ್‌ ಮುಕುಂದನ್‌
ಗಾಯನ: ಹರಿಚರಣ್‌, ರಕ್ಷಿತ ರಾವ್‌
ಚಲನಚಿತ್ರ: ಸಾರ್ವಜನಿಕರಿಗೆ ಸುವರ್ಣಾವಕಾಶ

ನೀಲಾಕಾಶ ಕೇಳು
ಪ್ರೀತಿ ಸಾಲ ಹೇಳು

ಮೊಗೆದರೂನೂ ಮುಗಿಯದ,
ಚಂದವಾದ ಸೋಜಿಗ

ನೀಲಾಕಾಶ ಕೇಳು
ಪ್ರೀತಿ ಸಾಲ ಹೇಳು

ಮುಂಗುರುಳ ಝರಿನೀರಿನ ಆಚೆಗೆ
ಕಣ್ಣರಳಿಸಿ ಮುರಿದೆ ನೀ ಬೇಸಿಗೆ

ರಂಗೇರಿತು ಭಾವನಾ ಕುಂಚಕೆ
ಅತಿಹೊಸತು ಬಾಳಲ್ಲಿ ಈ ಸಂಚಿಕೆ

ನೀಲಾಕಾಶ ಕೇಳು

ಸರೀಗಮ ಒಂದೇ ಸಮ
ಇಂಪಾದ ಹಾಡಿಗೆ

ಪ್ರತೀ ಸ್ವರ ಕಾಡೋ ಥರ
ತಂಪಾದೆ ಬಾಳಿಗೆ

ಮಳೆಬಿಲ್ಲ ರಂಗನ್ನು ತಾರುವ
ಗಿರಿಶಿಖರ ಮನದಲ್ಲೆ ತೋರುವ
ಜಾದುಗಾರನ ಪರಿ

ನೀಲಾಕಾಶ ಕೇಳು
ಪ್ರೀತಿ ಸಾಲ ಹೇಳು

ದುಂಬಿಯ ಮೋಹವ, ನೀಗು ಬಾ
ಜಾಜಿ ಮಲ್ಲಿಗೆ
ತುಂಬಿದ ಪ್ರೀತಿಯ, ತೇರನು
ಏರು ಮೆಲ್ಲಗೆ

ಕರೆಯೋಲೆ ಕಣ್ಣಲ್ಲೆ ತೋರುವ
ಮಧುಮಾಸ ಮನದಲ್ಲಿ ತಾರುವ
ಜಾದುಗಾರನ ಪರಿ

ನೀಲಾಕಾಶ ಕೇಳು
ಪ್ರೀತಿ ಸಾಲ ಹೇಳು

ಇಲ್ಲೇನೇ ಆಗಲಿ
ಸಂಕೋಚ ಮೂಡಲಿ
ಇಲ್ಲೇನೇ ಆಗಲಿ
ಸಾಂಗತ್ಯ ಸಾಗಲಿ

ಇಲ್ಲೇನೇ ಆಗಲಿ(೨)









ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)