Song: Manase O Manase(ಮನಸೇ ಓ ಮನಸೇ),Movie: Chandramukhi Pranasakhi (ಚಂದ್ರಮುಖಿ ಪ್ರಾಣಸಖಿ)
ಹಾಡು: ಮನಸೇ ಓ ಮನಸೇ
ರಚನೆ: ಕೆ. ಕಲ್ಯಾಣ್
ಸಂಗೀತ: ಕೆ. ಕಲ್ಯಾಣ್
ಗಾಯನ: ಕೆ.ಎಸ್. ಚಿತ್ರ, ಬದ್ರಿ ಪ್ರಸಾದ್
ಚಲನಚಿತ್ರ: ಚಂದ್ರಮುಖಿ ಪ್ರಾಣಸಖಿ
ಮನಸೇ ಓ ಮನಸೇ, ಎಂಥಾ ಮನಸೇ
ಮನಸೇ ಎಳೆ ಮನಸೇ
ಮನಸೇ ಓ ಮನಸೇ, ಎಂಥಾ ಮನಸೇ
ಮನಸೇ ಒಳ ಮನಸೇ
ಮನಸೇ ನಿನ್ನಲಿ ಯಾವ ಮನಸಿದೆ
ಯಾವ ಮನಸಿಗೆ, ನೀ ಮನಸು ಮಾಡಿದೆ
ಮನಸಿಲ್ಲದ ಮನಸಿನಿಂದ ಮನಸು ಮಾಡಿ ಮಧುರ ಮನಸಿಗೆ
ಮನಸುಕೊಟ್ಟು ಮನಸನ್ನೆ ಮರೆತುಬಿಟ್ಟೆಯಾ
ಮನಸುಕೊಟ್ಟು ಮನಸೊಳಗೆ ಕುಳಿತುಬಿಟ್ಟೆಯಾ
ಮನಸೇ ಓ ಮನಸೇ, ಎಂಥಾ ಮನಸೇ
ಮನಸೇ ಎಳೆ ಮನಸೇ
ಓ ಮನಸೇ, ಒಂದು ಮನಸಲೆರಡು ಮನಸು
ಎಲ್ಲ ಮನಸ ನಿಯಮ
ಓ ಮನಸೇ, ಎರಡು ಹಾಲು ಮನಸಲೊಂದೆ
ಮನಸು ಇದ್ದರೆ ಪ್ರೇಮ
ಮನಸಾಗೋ ಪ್ರತಿ ಮನಸಿಗು ಮನಸೋತಿರುವ
ಎಳೆ ಮನಸು ಎಲ್ಲ ಮನಸಿನ ಮನಸೇರೊಲ್ಲ
ಕೆಲ ಮನಸು ನಿಜಮನಸಿನಾಳದ ಮನಸ
ಹುಸಿಮನಸು ಅಂಥ ಮನಸನೆ ಮನಸೆನ್ನೊಲ್ಲ
ಮನಸೇ ಮನಸೇ ಹಸಿ ಹಸಿ ಮನಸೇ
ಮನಸು ಒಂದು ಮನಸಿರೋ, ಮನಸಿನ, ತನನನ
ತಿರುಗೊ ಮನಸಿಗೂ, ಮರುಗೊ ಮನಸಿದೆ
ಬರದ ಮನಸಿಗೂ, ಕರಗೊ ಮನಸಿದೆ
ಮೈಮನಸಲೆ ಮನಸಿದ್ದರೆ ಮನಸು ಮನಸ ಹಿಡಿತವಿದ್ದರೆ
ಮುಮ್ಮಲ ಮನಸಿದ್ದರು ಮುಳುಗೇಳದು ಮನಸು
ಮನಸೆಲ್ಲೋ ಮನಸುಮಾಡೊ ಮನಸಾ ಮನಸು
ಮನಸೇ ಓ ಮನಸೇ
ಓ ಮನಸೇ, ಮನಸು ಮನಸಲಿದ್ದರೇನೆ
ಅಲ್ಲಿ ಮನಶ್ಶಾಂತಿ
ಓ ಮನಸೇ, ಮನಸು ಮನಸ ಕೇಳಿ ಮನಸು
ಕೊಟ್ಟರೆ ಮನಸ್ಸಾಕ್ಷಿ
ಮನಸಾರೆ ಮನಸಿಟ್ಟು ಹಾಡುವ ಮನಸು
ಮನಸೂರೆ ಆಗೋದು ಮನಸಿಗು ಗೊತ್ತು
ಮನಸಿದ್ದರೆ ಮಾರ್ಗ ಅಂತ ಹೇಳುವ ಮನಸು
ಮನ್ನಿಸುವ ಮನಸಲ್ಲಿ ಮನಸಿಡೊ ಹೊತ್ತು
ಮನಸೇ ಮನಸೇ, ಬಿಸಿ ಬಿಸಿ ಮನಸೇ
ಮನಸು ಒಂದು ಮನಸಿರೋ, ಮನಸಿನ,ಧಿರನನ
ತುಮುಲ ಮನಸಿಗೂ, ಕೋಮಲ ಮನಸಿದೆ
ತೊದಲು ಮನಸಿಗೂ, ಮೃದುಲ ಮನಸಿದೆ
ಮನಸಿಚ್ಛೆ ಮನಸಿಸ ಒಳಗೆ, ಮನಸ್ವೇಚ್ಛೆ ಮನಸ ಹೊರಗೆ
ಮನಸ್ಫೂರ್ತಿ ಮನಸ ಪೂರ್ತಿ ಇರುವುದೇ ಮನಸು
ಮನಸೆಲ್ಲೊ ಮನಸು ಮಾಡೊ ಮನಸಾ ಮನಸು
ಮನಸೇ ಓ ಮನಸೇ
ಮನಸೇ ಎಳೆ ಮನಸೇ
ಮನಸೇ ಒಳ ಮನಸೇ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ