Song: Maathanaadi maayavaade (ಮಾತನಾಡಿ ಮಾಯವಾದೆ), Movie: I Love You (ಐ ಲವ್‌ ಯು)

ಹಾಡು: ಮಾತನಾಡಿ ಮಾಯವಾದೆ
ರಚನೆ: ಸಂತೋಷ್‌ ನಾಯಕ್‌
ಸಂಗೀತ: ಕಿರಣ್‌ ತೊಟ್ಟಂಬೈಲೆ
ಗಾಯನ: ಅರ್ಮಾನ್‌ ಮಲಿಕ್‌
ಚಲನಚಿತ್ರ: ಐ ಲವ್‌ ಯು


ಮಾತನಾಡಿ, ಮಾಯವಾದೆ,
ನಿಂಗೆ ಕಾದೆ ನಾ

ಬಳಿಗೆ ಬಂದು, ಎದುರು ನಿಂತು
ನನ್ನ ಪ್ರೀತಿಸು, ನನ್ನ ಪ್ರೀತಿಸು

ಮಾತನಾಡಿ, ಮಾಯವಾದೆ,
ನಿಂಗೆ ಕಾದೆ ನಾ
ಬಳಿಗೆ ಬಂದು, ಎದುರು ನಿಂತು
ನನ್ನ ಪ್ರೀತಿಸು, ಚಿನ್ನ, ನನ್ನ ಪ್ರೀತಿಸು

ಬಂಗಾರದಲ್ಲಿ ಬೊಂಬೆ ಮಾಡಿದ
ಆ ರಂಭೆಗಿಂತ ರಂಗು ನೀಡಿದ
ಭೂಮಿಗೆ ತಂದು ನಿನ್ನ ನಂಗೆ ನೀಡಿದ

ಸೌಂದರ್ಯ ಎಲ್ಲ ಒಟ್ಟುಗೂಡಿಸಿ
ಶೃಂಗಾರದಲ್ಲೆ ನಿನ್ನ ರೂಪಿಸಿ
ಆ ಬ್ರಹ್ಮ ಭಾರಿ ರಸಿಕ, ನಿನ್ನ ಮಾಡಿದ

ಹೋ, ಮದಿರೇಲೆ ನಿನ್ನ ಮೈಯ್ಯ
ಮಾಡಿದ್ದೆ ಒಂದು ಮಾಯ
ತುಟಿಮೇಲೆ ಸಣ್ಣ ಗಾಯ, ಮಾಡುವ ಭಯ
ನೀನೇ ನೀಡು ನಿನ್ನಯ

ಮಾತನಾಡಿ, ಮಾಯವಾದೆ,
ನಿಂಗೆ ಕಾದೆ ನಾ
ಬಳಿಗೆ ಬಂದು, ಎದುರು ನಿಂತು
ನನ್ನ ಪ್ರೀತಿಸು, ಚಿನ್ನ, ನನ್ನ ಪ್ರೀತಿಸು

ಈ ತೆಳ್ಳ ಬೆಳ್ಳ ಮೈಯ ಕಾಂತಿಗೆ
ಸೊಂಪಾದ ನಿನ್ನ ಕೇಶರಾಶಿಗೆ
ಅಭಿಮಾನಿಯಾದೆ ನಿನ್ನ ಗುಳಿಕೆನ್ನೆಗೆ

ಉಕ್ಕೇರಿ ಬಂದ ಎಲ್ಲ ಆಸೆಗೆ
ಈ ನಿನ್ನ ತೋಳೆ ನನ್ನ ಹಾಸಿಗೆ
ಮಾಡೋಣ ಸಣ್ಣ ತಪ್ಪು, ಕೊಡು ಒಪ್ಪಿಗೆ

ಹೋ, ಈ ಶಾಖ ಸಾಕ ಬೇಕಾ
ನೀ ಊದು ಪ್ರೇಮ ಶಂಖ

ನಾನೊಬ್ಬ ಹುಟ್ಟು ರಸಿಕ
ನೀಡುವೆ ಸುಖ, ಸವಿ ನೀ
ಸುಖದ ಪಾನಕ

ಕೊಂಚ ಕೊಂಚ, ನನ್ನ ನಿನ್ನ ಹಂಚಿಕೊಳ್ಳುವ
ಇಂಚು ಇಂಚು ದೇಹವನ್ನ ಲಂಚ ಕೇಳುವ
ದೋಚಿ ಬಾಚಿಕೊಳ್ಳುವ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)