Song: Marali Mareyaagi (ಮರಳಿ ಮರೆಯಾಗಿ) , Movie: Savaari (ಸವಾರಿ)

ಹಾಡು: ಮರಳಿ ಮರೆಯಾಗಿ
ರಚನೆ: ಸುಧೀರ್‌ ಅತ್ತಾವರ್
ಸಂಗೀತ: ಮಣಿಕಾಂತ್‌ ಕದ್ರಿ
ಗಾಯನ:‌ ಸಾಧನಾ ಸರ್ಗಮ್
ಚಲನಚಿತ್ರ: ಸವಾರಿ

ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು, ಒಲವು
ಸಿಹಿ ಸವಿ ಕವನ

ಮರಳಿ ಮರೆಯಾಗಿ
ತರಲಿ ತಂಗಾಳಿ
ಹೊಮ್ಮಿ ಹೊಸದಾದ ಹರುಷ, ಹರವು
ಹಸಿ ಖುಷಿ ಕವನ

ಕನಸ‌ ನೀ ನನಸಾಗಿಸಿ
ಕಲರವ ನೀ ಪಸರಿಸಿ

ನೀ ಇನಿಯನೇ ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು, ಒಲವು
ಸಿಹಿ ಸವಿ ಕವನ

ರಿಂಗಣ ಹೊಸತನ
ತನುವ ಈ ನರ್ತನ
ತಿಂಗಳ ಬೆಳಕ ನಾ
ಕಂಡೆ ಈ ಸಂಜೆ ನಾ

ಧರೆಗಿಳಿದ ಕಿನ್ನರ ನೀ
ವಿಸ್ಮಯದ ಕಿರಣವೆ ನೀ

ನನ್ನ ಕನಸುಗಳು
ತೇಲಾಡಿ ಕುಣಿಯುತಿವೆ

ನೀ ಇನಿಯನೇ ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು, ಒಲವು
ಸಿಹಿ ಸವಿ ಕವನ
ಬೆಲ್ಲದ ಪಾಕವೇ
ನಲ್ಲ ನಿನ್ನೊಲುಮೆಯೇ

ನಿಲ್ಲದ ತವಕವೇ
ಭವ್ಯ ಸಮ್ಮಿಲನಕೆ

ಆಗಸಕೆ ರಂಗೆರಚಿ
ಬಣ್ಣದಲಿ ಭಾವ ಜಿನುಗಿ

ನಲ್ಲ ಚಂದಿರನ
ಮೆಲ್ಲ ಕೀಳಿ ಮುಡಿಗಿರಿಸು

ನೀ ಇನಿಯನೇ ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು, ಒಲವು
ಸಿಹಿ ಸವಿ ಕವನ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)