Song: Badukina bannave (ಬದುಕಿನ ಬಣ್ಣವೇ‌), Movie: Tagaru (ಟಗರು)

ಹಾಡು: ಬದುಕಿನ ಬಣ್ಣವೇ
ರಚನೆ: ಜಯಂತ್‌ ಕಾಯ್ಕಿಣಿ
ಸಂಗೀತ: ಚರಣ್‌ ರಾಜ್‌
ಗಾಯನ: ಸಿದ್ಧಾರ್ಥ ಬೆಳ್ಮಣ್ಣು, ಸಂಜಿತ್‌ ಹೆಗ್ಡೆ, ಚರಣ್‌ ರಾಜ್
ಚಲನಚಿತ್ರ: ಟಗರು

ಬದುಕಿನ ಬಣ್ಣವೇ ಬದಲಾದರೆ, ಅದು ಪ್ರೇಮವೇ
ಬಡವನ ಕಣ್ಣಲೂ ಬೆಳಕಾದರೆ, ಅದು ಪ್ರೇಮವೇ
ಕೊರಳಿದು ಕಂಪಿಸಿ ಬಿಗಿಯಾದರೆ, ಅದು ಪ್ರೇಮವೇ
ತಿರುವಲಿ ದೇವರೇ ಎದುರಾದರೆ, ಅದು ಪ್ರೇಮವೇ

ಗಾಳಿಯಲಿ, ಬೆಚ್ಚನೆ ಅಲೆಯಿದೆ
ಹೃದಯಕೆ ಹೇಗೋ ದಾರಿ ಗೊತ್ತಾಗಿದೆ, ನಕ್ಷೆಯ ನೀಡದೆ

ಬದುಕಿನ ಬಣ್ಣವೇ ಬದಲಾದರೆ, ಅದು ಪ್ರೇಮವೇ
ಬಡವನ ಕಣ್ಣಲೂ ಬೆಳಕಾದರೆ, ಅದು ಪ್ರೇಮವೇ

ತಲಿಪದ ಕರೆ ನೂರಾರಿವೆ
ಬೆರಳಲೇ ಇದೆ ಸಂಭಾಷಣೆ
ಕನಸಿಗೂ ಸಹ ಕಂದಾಯವೆ
ವಿರಹವೇ ಕಿರು ಸಂಭಾವನೆ

ಕಳೆದರೆ ನೀನು, ಉಳಿವೆನೇ ನಾನು
ನೆಪವಿರದೆ ನಿನ್ನ, ಅಪಹರಿಸಿ ತಂದೆ
ಉಪಕರಿಸು ಶಿಕ್ಷೆಯ ನೀಡದೆ

ಬದುಕಿನ ಬಣ್ಣವೇ ಬದಲಾದರೆ, ಅದು ಪ್ರೇಮವೇ
ಬಡವನ ಕಣ್ಣಲೂ ಬೆಳಕಾದರೆ, ಅದು ಪ್ರೇಮವೇ
ಕೊರಳಿದು ಕಂಪಿಸಿ ಬಿಗಿಯಾದರೆ, ಅದು ಪ್ರೇಮವೇ
ತಿರುವಲಿ ದೇವರೇ ಎದುರಾದರೆ, ಅದು ಪ್ರೇಮವೇ





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)