Song: Yeno ide (ಏನೋ ಇದೆ), Movie: Psycho (ಸೈಕೋ)

ಹಾಡು: ಏನೋ ಇದೆ
ರಚನೆ: ವಿ. ಮನೋಹರ್‌, ರಘು ದೀಕ್ಷಿತ್‌
ಸಂಗೀತ: ರಘು ದೀಕ್ಷಿತ್‌
ಗಾಯನ: ರಘು ದೀಕ್ಷಿತ್‌
ಚಲನಚಿತ್ರ: ಸೈಕೋ

ಏನೋ ಇದೆ ಏನೋ ಇದೆ,ಈ ಪ್ರೀತಿಲಿ ಏನೋ ಇದೆ
ಏನಿದೆ ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ

ಬಾಳಿನ ದೀಪವೇ ಇಂದು ಆರಿ ಹೋಗಿದೆ
ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ

ಜೀವನ ಅಲ್ಲೋಲ ಕಲ್ಲೋಲವಾಗಿದೆ
ಕರೆಯುವ ಕೊರಳೇ ಮೌನ ತಾಳಿದೆ

ಏನಿದೆ, ಏನೋ ಇದೆ, ಈ ಪ್ರೀತಿಲಿ ಏನೋ ಇದೆ
ಏನೋ ಇದೆ, ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ

ಓ ತನ್ನ ರಾಗವನ್ನೇ  ಹಾಡು ತೊರೆದಂತೆ
ಭಾವದಲ್ಲಿ ಬರೆದ ಚಿತ್ರ ಹರಿದಂತೆ

ಕನ್ನ ಹಾಕಿ ಹೃದಯವನ್ನೇ ಕೊರೆದಂತೆ
ನನ್ನ ಶೋಕಗೀತೆ ನಾನೇ ಬರೆದಂತೆ

ಪರಿತಾಪವೇ ಪ್ರೀತಿಯ ಫಲವೇ
ಸರಿ ಉತ್ತರ ನೀಡು ನೀ ಒಲವೇ

ಬೆಳದಿಂಗಳೇ, ಮರೆಯಾಗಿದೆ, ಮರೆಯಾಗಿದೆ

ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ

ಏನೋ ಇದೆ, ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ

ಕಾಡುವಂಥ ನೂರು ನೋವು ಇರುಳಲ್ಲಿ
ನಾಟಿದಂತೆ ಬಾಣವೊಂದು ಎದೆಯಲ್ಲಿ

ನೀನೇ ಬೇಕು ಎಂಬ ನನ್ನ ಛಲದಲ್ಲಿ
ಲೂಟಿಯಾಗಿ ಹೋದೆನಲ್ಲ ಒಲವಲ್ಲಿ

ಇದು ಎಚ್ಚರವಿಲ್ಲದ ಕನಸೇ
ಅಥವಾ ಇದು ಸಾವಿನ ತಿನಿಸೇ

ನಿಜ ಬಣ್ಣವೇ, ಬಯಲಾಗಿದೆ, ಬಯಲಾಗಿದೆ

ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ

ಬಾಳಿನ ದೀಪವೇ ಇಂದು ಆರಿ ಹೋಗಿದೆ
ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ

ಜೀವನ ಅಲ್ಲೋಲ ಕಲ್ಲೋಲವಾಗಿದೆ
ಕರೆಯುವ ಕೊರಳೇ ಮೌನ ತಾಳಿದೆ

ಏನಿದೆ, ಏನೋ ಇದೆ, ಈ ಪ್ರೀತಿಲಿ ಏನೋ ಇದೆ, ಹೇ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)