Song: Ondu munjane(ಒಂದು ಮುಂಜಾನೆ), Movie: Yajamana(ಯಜಮಾನ)

ಹಾಡು: ಒಂದು ಮುಂಜಾನೆ
ರಚನೆ: ಕವಿರಾಜ್‌
ಸಂಗೀತ: ವಿ. ಹರಿಕೃಷ್ಣ
ಗಾಯನ: ಸೋನು ನಿಗಮ್‌, ಶ್ರೇಯ ಘೋಶಾಲ್‌
ಚಲನಚಿತ್ರ: ಯಜಮಾನ


ಒಂದು ಮುಂಜಾನೆ, ಹಂಗೆ ಸುಮ್ಮನೆ
ನಾವು ಹೋಗುವ ಬಾರೇ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೇ


ನನ್ನ ತಾರೆ, ನಿನ್ನ ಮೇಲೆ
ಗೋಲಿ ಆಡ್ತಿದ್ದ ವಯಸಲ್ಲೇ ಪ್ರೀತಿ
ಶುರುವಾಗೋಯ್ತು


ನೀ ಕಾಣೋ, ಎಲ್ಲಾ ಕನಸಾ
ಮಾಡುವೆನೂ, ನಾನು ನನಸಾ
ದಾಸ ನಿಂಗೆ ಖಾಸಾ


ಒಂದು ಮುಂಜಾನೆ, ಹಂಗೆ ಸುಮ್ಮನೆ
ನಾವು ಹೋಗುವ ಬಾರೇ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೇ


ಯಾರಿಲ್ಲದ ಊರಲ್ಲಿ, ಒಂದು ನದಿ ದಂಡೇಲಿ
ನಾವೊಂದು ಪುಟ್ಟ ಮನೆ ಮಾಡಿ


ಬೆಳದಿಂಗಳ ರಾತ್ರೀಲಿ, ನಕ್ಷತ್ರದ ಹೊದಿಕೇಲಿ
ನಾನಿರುವೆ ನಿನ್ನ ಮಡಿಲಲ್ಲಿ


ನಿನಗೆ ನಾನು, ನನಗೆ ನೀನು
ನನ್ನ ಜಗದ, ದೊರೆಯು ನೀನು


ರಾಣೀ ಬಾರೆ


ನೀನಿರದೇ ಒಂದೂ ನಿಮಿಷ
ಇರಲಾರ ನಿನ್ನ ಅರಸ
ದಾಸ ನಿಂಗೆ ಖಾಸಾ


ಒಂದು ಮುಂಜಾನೆ, ಹಂಗೆ ಸುಮ್ಮನೆ
ನಾವು ಹೋಗುವ ಬಾರೇ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೇ


ಸಿಹಿಮುತ್ತಿನ ಕಂದಾಯ, ಪ್ರತಿನಿತ್ಯವು ಸಂದಾಯ
ಮಾಡೋದು ಮರಿಬೇಡ ಎಂದೂ


ಒಂದೇ ಕಣೆ ಒತ್ತಾಯ, ನಿಂಗೆ ಹಣೆ ಬಿಂದಿಯ
ದಿನನಿತ್ಯ ಇಡೊ ಕೆಲಸ ನಂದು


ನನದೇ ಕಣ್ಣು, ತಗಲೋ ಭಯವೇ
ಕಣ್ಣು ಮುಚ್ಚು, ಅಲ್ಲೂ ಸಿಗುವೆ


ರಾಣೀ ಬಾರೆ


ಕಾವೇರಿ, ಕಾಯೋ ಕೆಲಸ
ಮಾಡುವೆನು ಎಲ್ಲಾ ದಿವಸ
ದಾಸ ನಿಂಗೆ ಖಾಸಾ


Any other kannada song lyrics that you would like to see here? Just ask for in the comments section below



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)