Song: Naaniruvude nimagaagi(ನಾನಿರುವುದೆ ನಿಮಗಾಗಿ‌), Movie: Mayura (ಮಯೂರ)

ಹಾಡು: ನಾನಿರುವುದೆ ನಿಮಗಾಗಿ
ರಚನೆ: ಚಿ. ಉದಯಶಂಕರ್
ಸಂಗೀತ:‌ ಜಿ.ಕೆ. ವೆಂಕಟೇಶ್
ಗಾಯನ: ಡಾ. ರಾಜಕುಮಾರ್‌
ಚಲನಚಿತ್ರ: ಮಯೂರ

ನಾನಿರುವುದೆ ನಿಮಗಾಗಿ

ನಾನಿರುವುದೆ ನಿಮಗಾಗಿ
ನಾಡಿರುವುದು ನಮಗಾಗಿ

ಕಣ್ಣೀರೇಕೆ, ಬಿಸಿಯುಸಿರೇಕೆ

ಕಣ್ಣೀರೇಕೆ, ಬಿಸಿಯುಸಿರೇಕೆ
ಬಾಳುವಿರೆಲ್ಲ ಹಾಯಾಗಿ(೨)

ಒಂದೇ ನಾಡಿನ ಮಕ್ಕಳು ನಾವು
ಸೋದರರಂತೆ ನಾವೆಲ್ಲ{೨}

ನಿಮ್ಮೊಡನಿಂದು, ನಾನೂ ನೊಂದು(೨)
ಮಿಡಿದ ಕಂಬನಿ ಆರಿಲ್ಲ

ಭರವಸೆ ನೀಡುವೆ ಇಂದು
ನಾ ನಿಮ್ಮೊಡನಿರುವೆನು ಎಂದೂ {೨}

ತಾಯಿಯ ಆಣೆ ನಿಮ್ಮನು ಕಾಡುವ ವೈರಿಯ ಉಳಿಸೊಲ್ಲ

ನಾನಿರುವುದೆ ನಿಮಗಾಗಿ
ನಾಡಿರುವುದು ನಮಗಾಗಿ

ಕಣ್ಣೀರೇಕೆ, ಬಿಸಿಯುಸಿರೇಕೆ

ಕಣ್ಣೀರೇಕೆ, ಬಿಸಿಯುಸಿರೇಕೆ
ಬಾಳುವಿರೆಲ್ಲ ಹಾಯಾಗಿ(೨)

ನಾನಿರುವುದೆ ನಿಮಗಾಗಿ

ಸಾವಿರ ಜನ್ಮದ ಒಉಣ್ಯವೊ ಏನೋ
ನಾನೀ ನಾಡಲಿ ಜನಿಸಿರುವೆ{೨}

ತಪಸಿನ ಫಲವೋ, ಹಿರಿಯರ ವರವೋ(೨)
ನಿಮ್ಮೀ ಪ್ರೀತಿಯ ಗಳಿಸಿರುವೆ

ವೈರಿಯ ಬಡಿದೋಡಿಸುವ
ಈ ನಾಡಿಗೆ ಬಿಡುಗಡೆ ತರುವ{೨}

ಜನತೆಗೆ ನೆಮ್ಮದಿ ಸೌಖ್ಯವ ತರಲು
ಪ್ರಾಣವನೇ ಕೊಡುವೆ

ನಾನಿರುವುದೆ ನಿಮಗಾಗಿ
ನಾಡಿರುವುದು ನಮಗಾಗಿ

ಕಣ್ಣೀರೇಕೆ, ಬಿಸಿಯುಸಿರೇಕೆ

ಕಣ್ಣೀರೇಕೆ, ಬಿಸಿಯುಸಿರೇಕೆ
ಬಾಳುವಿರೆಲ್ಲ ಹಾಯಾಗಿ(೨)

ನಾನಿರುವುದೆ ನಿಮಗಾಗಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Hesaru poorthi helade, Movie: Paramathma

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)