Song: Helade kelade(ಹೇಳದೇ, ಕೇಳದೇ) Movie- Geetha(ಗೀತ)

ಹಾಡು: ಹೇಳದೇ, ಕೇಳದೇ
ರಚನೆ: ಗೌಸ್‌ ಪೀರ್‌
ಸಂಗೀತ: ಅನೂಪ್‌ ರೂಬೆನ್ಸ್‌
ಗಾಯನ: ರಾಜೇಶ್‌ ಕೃಷ್ಣನ್‌, ಅನನ್ಯ ಭಟ್‌
ಚಲನಚಿತ್ರ: ಗೀತ 



ಹೇಳದೇ ಕೇಳದೇ, ಜೀವವು ಜಾರಿದೆ
ನಿನ್ನ ಹೆಜ್ಜೆ ಗುರುತನ್ನೇ ನಾ ತುಳಿದೆ


ನೆರಳು ಸೇರಿ ನೆರಳಿಗೆ
ಉಸಿರು ಬಂತು ಉಸಿರಿಗೆ


ಮನದೊಳಗೆ ಮೆರವಣಿಗೆ
ಬಿಡುವನು ಕೊಡದೆ ಸಾಗಿದೆ


ಬೆಳವಣಿಗೆ, ಹೊಸ ಬರವಣಿಗೆ
ಹಣೆಯಲಿ ಈಗ ಮೂಡಿದೆ


ಹೇಳದೇ ಕೇಳದೇ, ಜೀವವು ಜಾರಿದೆ
ನಿನ್ನ ಹೆಜ್ಜೆ ಗುರುತನ್ನೇ ನಾ ತುಳಿದೆ


ನಿನ್ನ ತೋಳೇ ತಂಗುದಾಣ
ಅಲ್ಲೆ ಜೀವಿಸಲೆ ಶಾಶ್ವತ


ನಿನ್ನ ಮೇಲೆ ಪಂಚಪ್ರಾಣ
ನನ್ನ ಜಗ ನಿನಗೆ ಸೀಮಿತ


ಕೇಳದೆ ಅನಿಸಿಕೆ, ಸೇರಿದೆ ಹೃದಯಕೆ


ನಿನ್ನ ಒಲವೇ ನೆಪವೀಗ ಬದುಕೋಕೆ


ನೆರಳು ಸೇರಿ ನೆರಳಿಗೆ
ಉಸಿರು ಬಂತು ಉಸಿರಿಗೆ


ಮನದೊಳಗೆ ಮೆರವಣಿಗೆ
ಬಿಡುವನು ಕೊಡದೆ ಸಾಗಿದೆ


ಎಲ್ಲ ಜನುಮ ತರಲು ಪ್ರೇಮ
ಆಗಿ ಬಾ ನೀನೆ ನೇಮಕ


ನಿಂದೆ ಅಮಲು, ಅದಲು ಬದಲು
ನನ್ನ ದಿನಚರಿಯ ಕಾಯಕ


ಮಾಗಿದೆ ಪರಿಚಯ, ಭಾವದ ವಿನಿಮಯ


ನಿನ್ನ ಹೆಸರೇ ನನ್ನುಸಿರ ಅಡಿಪಾಯ


ನೆರಳು ಸೇರಿ ನೆರಳಿಗೆ
ಉಸಿರು ಬಂತು ಉಸಿರಿಗೆ


ಮನದೊಳಗೆ ಮೆರವಣಿಗೆ
ಬಿಡುವನು ಕೊಡದೆ ಸಾಗಿದೆ

Any other kannada song lyrics that you would like to see here? Just ask for in the comments section below



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)