Song: Summane (ಸುಮ್ಮನೆ) Movie: Run Antony (ರನ್‌ ಆಂಟನಿ)

ಹಾಡು: ಸುಮ್ಮನೆ
ರಚನೆ: ರಘು ಶಾಸ್ತ್ರಿ
ಸಂಗೀತ:‌ ಮಣಿಕಾಂತ್‌ ಕದ್ರಿ
ಗಾಯನ: ಜಾವೆದ್‌ ಅಲಿ 
ಚಲನಚಿತ್ರ: ರನ್‌ ಆಂಟನಿ

ಸೆಲೆ, ಸೆಲೆ, ಸೆಲೆ, ನಗುವಿನ ಸೆಲೆ
ಬಲೆ, ಬಲೆ, ಬಲೆ, ನೆನಪಿನ ಬಲೆ{೨}

ಸುಮ್ಮನೆ, ಸುಮ್ಮನೆ
ಪದೆ ಪದೆ ನೋಡಿ, ಎದುರಲಿ ಮೂಡಿ
ಸೆಳೆಯುವೆ ನನ್ನನೇ

ಸುಮ್ಮನೆ, ಸುಮ್ಮನೆ
ಅರೆಬರೆ ನೋಡಿ, ಪರಿಪರಿಯಾಗಿ
ಮರೆಸುವೆ ನನ್ನನೇ

ಎಂಥಾ ನಶೆಯಿದೆ ಈ ಒಲವಿನಲೀ
ಇಂಥಾ ಅಮಲಿಗೆ ನಾ ಆದೆ ಬಲಿ
ಸಣ್ಣ ಸಲಿಗೆ ಸಾಕು ನನಗೆ ನಿನ್ನ ಜೊತೆಯಲಿ
ಹಾ, ನಿನ್ನಾ ಕಥೆಯಲಿ
ಹಾ, ನಿನ್ನಾ ಮನಸಲಿ

ಅನುರಾಗಿ ನಾನು ಈಗ ಬೇಕು ಕೊಂಚ ಸಂತಾಪ
ಸಹಭಾಗಿ ನೀನು ಇಲ್ಲಿ ಮಾಡಿ ಹೋದೆ ಆರೋಪ

ಓ, ಅನುರಾಗಿ ನಾನು ಈಗ ಬೇಕು ಕೊಂಚ ಸಂತಾಪ
ಸಹಭಾಗಿ ನೀನು ಇಲ್ಲಿ ಮಾಡಿ ಹೋದೆ ಆರೋಪ

ನೆರಳು ಕೂಡ ನರಳಿದಂತೆ ನೀನು ತೊರೆದಾಗ
ಮರಳಿ ನನ್ನ ಮರುಳು ಮಾಡು, ನೀನೆ ಶುಭಯೋಗ

ಎಂಥಾ ಸೊಗಸಿದೆ ಈ ಸೆಳೆತದಲಿ
ಇಂಥಾ ಚಲುವಿಗೆ ನಾ ಆದೆ ಬಲಿ
ಸಣ್ಣ ಸಲಿಗೆ ಸಾಕು ನನಗೆ ನಿನ್ನ ಜೊತೆಯಲಿ
ಹಾ, ನಿನ್ನಾ ಕಥೆಯಲಿ
ಹಾ, ನಿನ್ನಾ ಮನಸಲಿ

ಕಿರುಬೆರಳ ತೊರೆದು ಹೋದ ನಿನ್ನ ಮೇಲೆ ಮುಂಗೋಪ
ಲಘುವಾಗಿ ಎದೆಯಾ ಒಳಗೆ ನಡೆದ ಹಾಗೆ ಭೂಕಂಪ

ಓ, ಕಿರುಬೆರಳ ತೊರೆದು ಹೋದ ನಿನ್ನ ಮೇಲೆ ಮುಂಗೋಪ
ಲಘುವಾಗಿ ಎದೆಯಾ ಒಳಗೆ ನಡೆದ ಹಾಗೆ ಭೂಕಂಪ

ಅರಸಿ ನಿನ್ನ ಅಲೆಯುವಾಗ ನೆನಪಿನ ದಹನ
ಒರೆಸಿ ಕಣ್ಣ ಸಲಹು ನನ್ನ ನೀನೆ ಉಪಶಮನ 

ಎಂಥಾ ಸೊಗಸಿದೆ ಈ ಸೆಳೆತದಲಿ
ಇಂಥಾ ಚಲುವಿಗೆ ನಾ ಆದೆ ಬಲಿ
ಸಣ್ಣ ಸಲಿಗೆ ಸಾಕು ನನಗೆ ನಿನ್ನ ಜೊತೆಯಲಿ
ಹಾ, ನಿನ್ನಾ ಕಥೆಯಲಿ
ಹಾ, ನಿನ್ನಾ ಮನಸಲಿ

ಸುಮ್ಮನೆ, ಸುಮ್ಮನೆ
ಪದೆ ಪದೆ ನೋಡಿ, ಎದುರಲಿ ಮೂಡಿ
ಸೆಳೆಯುವೆ ನನ್ನನೇ

ಸುಮ್ಮನೆ, ಸುಮ್ಮನೆ
ಅರೆಬರೆ ನೋಡಿ, ಪರಿಪರಿಯಾಗಿ
ಮರೆಸುವೆ ನನ್ನನೇ

ಎಂಥಾ ನಶೆಯಿದೆ ಈ ಒಲವಿನಲೀ
ಇಂಥಾ ಅಮಲಿಗೆ ನಾ ಆದೆ ಬಲಿ
ಸಣ್ಣ ಸಲಿಗೆ ಸಾಕು ನನಗೆ ನಿನ್ನ ಜೊತೆಯಲಿ
ಹಾ, ನಿನ್ನಾ ಕಥೆಯಲಿ
ಹಾ, ನಿನ್ನಾ ಮನಸಲಿ








ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)