125th post Song: Ide Naadu ide bhaashe (ಇದೇ ನಾಡು ಇದೇ ಭಾಷೆ), Movie: Tirugubaana (ತಿರುಗು ಬಾಣ)

ಹಾಡು: ಇದೇ ನಾಡು ಇದೇ ಭಾಷೆ
ರಚನೆ:‌ ಆರ್.‌ ಎನ್.‌ ಜಯಗೋಪಾಲ್
ಸಂಗೀತ: ಸತ್ಯಂ
ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ
ಚಲನಚಿತ್ರ: ತಿರುಗು ಬಾಣ

ಇದೇ ನಾಡು, ಇದೇ ಭಾಷೆ
ಎಂದೆಂದೂ ನನ್ನದಾಗಿರಲಿ
ಎಲ್ಲೇ ಇರಲಿ, ಹೇಗೇ ಇರಲಿ
ಕನ್ನಡವೆ ನಮ್ಮ ಉಸಿರಲ್ಲಿ{೨}

ಇದೇ ನಾಡು, ಇದೇ ಭಾಷೆ
ಎಂದೆಂದೂ ನನ್ನದಾಗಿರಲಿ

ಕರುನಾಡು ಸ್ವರ್ಗದ ಸೀಮೆ
ಕಾವೇರಿ ಹುಟ್ಟಿದ ನಾಡು

ಕಲ್ಲಲ್ಲಿ ಕಲೆಯನು ಕಂಡ
ಬೇಲೂರ ಶಿಲ್ಪದ ಬೀಡು

ಬಸವೇಶ್ವರ, ರನ್ನ ಪಂಪರ
ಕವಿವಾಣಿಯ ನಾಡು

ಇದೇ ನಾಡು, ಇದೇ ಭಾಷೆ
ಎಂದೆಂದೂ ನನ್ನದಾಗಿರಲಿ

ಚಾಮುಂಡಿ ರಕ್ಷೆಯು ನಮಗೆ
ಗೊಮಟೇಶ ಕಾವಲು ಇಲ್ಲಿ

ಶೃಂಗೇರಿ ಶಾರದೆ ವೀಣೆ
ರಸತುಂಗೆಯಾಗಿದೆ ಇಲ್ಲಿ

ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ
ಜನಿಸಿದ ಈ ನಾಡು

ಇದೇ ನಾಡು, ಇದೇ ಭಾಷೆ
ಎಂದೆಂದೂ ನನ್ನದಾಗಿರಲಿ

ಏಳೇಳು ಜನ್ಮವೆ ಬರಲಿ
ಈ ಮಣ್ಣಲಿ ನಾನು ಹುಟ್ಟುವೆ

ಏನೇನು ಕಷ್ಟವೇ ಇರಲಿ
ಸಿರಿಗನ್ನಡಕಾಗೇ ದುಡಿಯುವೆ

ತನು ಕನ್ನಡ, ನುಡಿ ಕನ್ನಡ
ಮನ ಕನ್ನಡವಾಗಿರಲಿ

ಇದೇ ನಾಡು, ಇದೇ ಭಾಷೆ
ಎಂದೆಂದೂ ನನ್ನದಾಗಿರಲಿ
ಎಲ್ಲೇ ಇರಲಿ, ಹೇಗೇ ಇರಲಿ
ಕನ್ನಡವೆ ನಮ್ಮ ಉಸಿರಲ್ಲಿ

ಇದೇ ನಾಡು, ಇದೇ ಭಾಷೆ

ಎಂದೆಂದೂ ನನ್ನದಾಗಿರಲಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)