Song: Naav maneg hogodilla (ನಾವ್‌ ಮನೆಗ್‌ ಹೋಗೋದಿಲ್ಲ) Movie: Victory 2 (ವಿಕ್ಟರಿ- ೨)

ಹಾಡು: ನಾವ್‌ ಮನೆಗ್‌ ಹೋಗೋದಿಲ್ಲ
ರಚನೆ: ಯೋಗರಾಜ್‌ ಭಟ್
ಸಂಗೀತ: ಅರ್ಜುನ್‌ ಜನ್ಯ
ಗಾಯನ: ವಿಜಯ್‌ ಪ್ರಕಾಶ್
ಚಲನಚಿತ್ರ: ವಿಕ್ಟರಿ- ೨

ಮನೆಗ್‌ ಬಂದಿಲ್ಲ, ಅಂತ ಬೈಬೇಡಿ ನೀವು
ಹನಿ ನೀರಾವರಿಯ ನಡ್ಸಿದ್ದೀವಿ ನಾವು{೨}

ಹದಿನೈದು ನಿಮಿಷದಲ್ಲಿ, ಬರ್ತೀನಿ ಅಂತ ನಾನು
ಆಗ್ಲೇ ಮೆಸೇಜು ಮಾಡಿಲ್ವಾ? ಚಿನ್ನ, ಆಗ್ಲೇ ಮೆಸೇಜು ಮಾಡಿಲ್ವಾ?
ಬರಲಿಲ್ಲ ಅಂತ ಅಂದ್ರೆ,ಅದೇ ಮೆಸೇಜು ತಿರ್ಗ
ಓದೋಕೆ ನಿಂಗೆ ಆಗಲ್ವಾ? ಯಾಕೆ? ಕರೆನ್ಸಿ ಮೊನ್ನೆ ಹಾಕ್ಸಿಲ್ವಾ?

ನಾವ್‌ ಮನೆಗ್‌ ಹೋಗೋದಿಲ್ಲ 
ನಮ್ಗೆ ಬಾಗ್ಲು ತೆಗೆಯೋರಿಲ್ಲಾ
ಇಲ್ಲ, ಇಲ್ಲ, ಇಲ್ಲ ಇಲ್ಲ
ನಾನ್‌ ಮನೆಗ್‌ ಓಗದಿಲ್ಲ, ಇಲ್ಲ

ಮನೆಗ್‌ ಬಂದಿಲ್ಲ, ಅಂತ ಬೈಬೇಡಿ ನೀವು
ಹನಿ ನೀರಾವರಿಯ ನಡ್ಸಿದ್ದೀವಿ ನಾವು

ಹೆಂಡಿರು ಮಕ್ಕಳ ಚಿಂತೆ ಮಾಡೋಕ್ಕೆ
ಬಾರಿಗೆ ಬಂದ್ರೇ ತಪ್ಪೇನಿದೆ? ತಪ್ಪೇನಿದೆ, ತಪ್ಪೇನಿದೆ?
ಒಮ್ಮೊಮ್ಮೆ ಕುಸ್ತಿ, ಒಮ್ಮೊಮ್ಮೆ ಪ್ರೀತಿ
ಸಂಸಾರದಲ್ಲಿ ಮತ್ತೇನಿದೆ? ಮತ್ತೇನಿದೆ? ಮತ್ತೇನಿದೆ?

ಒಳ್ಳೇದಲ್ಲ ಕುಡಿತ, ಬಿಡುವುದು ಖಚಿತ
ಲೇಡೀಸೆಲ್ಲಾ ಕೇಳಿ, ಈ ಫಿಲಾಸಫಿ ಉಚಿತ

ಮನೆಗೆ ಬಾ ನೋಡ್ಕೋತೀನಿ, ಅಂತೀರಲ್ಲಾ ನಮಗೆ
ನಾವೇನು ಮನೆ ಕಟ್ಸಿಲ್ವಾ? ಇ.ಎಂ.ಇ ತಿಂಗ್ಳಾ ಕಟ್ಟಲ್ವಾ? 

ನಾವ್‌ ಮನೆಗ್‌ ಹೋಗೋದಿಲ್ಲ(೨)
ನಮ್ಗೆ ಬಾಗ್ಲು ತೆಗೆಯೋರಿಲ್ಲಾ
ಇಲ್ಲ, ಇಲ್ಲ, ಇಲ್ಲ ಇಲ್ಲ

ನಾವು ಜಲ್ದಿ ಬಂದ್ರೆ, ಜಲ್ದಿ ಯಾಕೆ ಬಂದ್ರಿ ಅಂತೀರಾ?
ಚೂರು ಲೇಟಾಗ್‌ ಬಂದ್ರೆ, ಲೇಟಾಗ್‌ ಯಾಕೆ ಬಂದ್ರಿ ಅಂತೀರಾ?
ಹೇಳಿದ್‌ ಟೈಮ್ಗ್‌ ಬಂದ್ರೆ, ಏನಿವತ್ತು ಕರೆಕ್ಟ್‌ ಟೈಮ್ಗ್‌ ಬಂದ್ರಿ ಅಂತೀರಾ?

ನಾವು ಬರ್ಬೇಕಾ ಬೇಡ್ವಾ? ನಾವು ಬರ್ಬೇಕಾ ಬೇಡ್ವಾ?
ಈ ಪ್ರಶ್ನೆ ಯಾರಿಗ್‌ ಕೇಳಣಾ?
ಇದ್ಕೆ ಮೀಟಿಂಗ್‌ ಆಗ್ಬೇಕು, ಇದ್ಕೆ ಮೀಟಿಂಗ್‌ ಆಗ್ಬೇಕು
ಒಂದ್‌ ಹಾಫ್‌ ಬಾಟ್ಲು ಎಕ್ಸ್ಟ್ರಾ ಹೇಳಣಾ

ಆಗಲ್ಲಪ್ಪ ನಮ್‌ ಕೈಲಿ, ಉಗುಸ್ಕಳಕ್ಕೆ ನಿಮ್‌ ಕೈಲಿ

ಓ, ಸಂಸಾರ ಯಾಕೆ ಬೇಕು? ಅಂತೀರಲ್ಲ ನಮ್ಗೆ
ನಾವೇನು ತಾಳಿ ಕಟ್ಟಿಲ್ವಾ?  ಹಂಗೇ
ಒಂದೆರಡು ಮಕ್ಳು ಮಾಡಿಲ್ವಾ?

ನಾವ್‌ ಮನೆಗ್‌ ಹೋಗೋದಿಲ್ಲ(೨)
ನಮ್ಗೆ ಬಾಗ್ಲು ತೆಗೆಯೋರಿಲ್ಲಾ
ಇಲ್ಲ ಇಲ್ಲ ಇಲ್ಲ ಇಲ್ಲ
ನಾವ್‌ ಮನೆಗ್‌ ಹೋಗೋದಿಲ್ಲ, ಇಲ್ಲ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)