Song: Soundarya samara (ಸೌಂದರ್ಯ ಸಮರ), Movie: Kaddipudi (ಕಡ್ಡಿಪುಡಿ)

ಹಾಡು: ಸೌಂದರ್ಯ ಸಮರ
ರಚನೆ: ಯೋಗರಾಜ್‌ ಭಟ್‌
ಸಂಗೀತ:ವಿ. ಹರಿಕೃಷ್ಣ 
ಗಾಯನ: ಸೋನು ನಿಗಮ್‌
ಚಲನಚಿತ್ರ: ಕಡ್ಡಿಪುಡಿ

ಸೌಂದರ್ಯ ಸಮರ, ಸೋತವನೆ ಅಮರ(೨)
ಕಳೆದುಕೊಳ್ಳಲು ಬೇರೆ ಏನೂ ಇಲ್ಲ ಇಲ್ಲಿ
ಇರುವುದನೆ ಪಡೆದು, ತಿರುಗಿ ಕಳೆದುಕೊಳ್ಳಿ.
ಕಳೆದು ಪಡೆದುಕೊಳ್ಳಿ


ಅಮಲುಗಣ್ಣಿಗೆ ಇವಳು ಸದಾ ಸುಂದರ ಗಾಂಧಾರಿ
ಅದ ತಿಳಿದ ಮದನಾರಿ, ಅತಿವಿರಹಿ ವ್ಯಾಮೋಹಿ
ಸುಡುತಿರುವ ಸಾರಂಗಿ, ಮೃದು ಮಧುರ ಮಾಕಾಳಿ


ಈ ಒದ್ದೆ, ಈ ಮುದ್ದೆ ಕೋಲ್ಮಿಂಚಿನ ಹೆಸರೇನು
ನೂರು ನರಕವ ಕಂಡ, ಮುದ್ದು ಚತುರ ಸಖಿಯು
ನಟ್ಟ ನಡುಬೀದಿಯಲ್ಲಿ ಬಿರಿದ ಡೇರೆ ಹೂವು


ಸಿಕ್ಕರು ಸಿಗಳು, ಇದ್ದರು ಇರಳು
ಇವಳದೆ ಹಗಲು, ಇವಳದೆ ಇರುಳು 


ಸೌಂದರ್ಯ ಸಮರ, ಸೋತವನೆ ಅಮರ(೨)
ಕಳೆದುಕೊಳ್ಳಲು ಬೇರೆ ಏನೂ ಇಲ್ಲ ಇಲ್ಲಿ
ಇರುವುದನೆ ಪಡೆದು, ತಿರುಗಿ ಕಳೆದುಕೊಳ್ಳಿ.
ಕಳೆದು ಪಡೆದುಕೊಳ್ಳಿ


ಕಾಮನೆಯ ಜೇನಿಗೆ ಕವಣೆ ಬೀಸಿದ ರಮಣಿ
ಮುಗಿಲ ಮಾನ ತೆಗೆದ ಕೊಬ್ಬಿ ನಿಂತ ಧರಣಿ


ರಸಿಕ ನಿಶ ರಾತ್ರಿಯ ಕುರುಡು ಬೀದಿ ದೀಪ
ತಾರೆ ಬೆಳಕಿಗೆ ಇವಳ ಹೊಳೆವ ಮೈಯ ಶಾಪ
ಕಣ್ಣು ಕೆನ್ನೈದಿಲೆಯೋ, ಮಾತ್ಸರ್ಯ ಸೆಲೆಯೋ
ಉಕ್ಕು ಉನ್ಮಾದದ ದೇಹ ಮನ್ಮಥನ ಬಲೆಯೋ
ದೇಹ ದೇಗುಲ, ಈ ದೇಹ ದೇಗುಲ(೨)


ಸೌಂದರ್ಯ ಸಮರ, ಸೋತವನೆ ಅಮರ(೨)
ಕಳೆದುಕೊಳ್ಳಲು ಬೇರೆ ಏನೂ ಇಲ್ಲ ಇಲ್ಲಿ
ಇರುವುದನೆ ಪಡೆದು, ತಿರುಗಿ ಕಳೆದುಕೊಳ್ಳಿ.
ಕಳೆದು ಪಡೆದುಕೊಳ್ಳಿ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)