Song: Hodeya doora o jotegaara (ಹೋದೆಯ ದೂರ ಓ ಜೊತೆಗಾರ), Movie: Anubhava (ಅನುಭವ)

ಹಾಡು: ಹೋದೆಯ ದೂರ ಓ ಜೊತೆಗಾರ
ರಚನೆ: ವಿ. ಮನೋಹರ್
ಸಂಗೀತ:‌ ಎಲ್. ವೈದ್ಯನಾಥನ್
ಗಾಯನ: ವಾಣಿ ಜಯರಾಂ
ಚಲನಚಿತ್ರ: ಅನುಭವ


ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ(೨)

ನೀ ಶೃತಿಯ ಮಿಡಿದಾಗ, ಹಾಡಿದೆ ನಾ ಹುಸಿರಾಗ
ತೋರಿದೆ ನೀ ಅನುರಾಗ, ಗಮನಿಸದೆ ತೆರಳಿದೆ ನಾ
ಆ, ಆ, ಆ, ಆ

ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ

ನನ್ನ ಬಳಿ ಸಾರಿ, ಮೆಲ್ಲ ಬಿಗಿದಾಗ
ತಳ್ಳಿ ದೂರಾದೆ, ಅರಿಯದೆ ನಾ

ಮದನ ನೀನಾಗಿ, ಮುದದಿ ಸೆಳೆದಾಗ
ರತಿಯ ಸವಿಲೀಲೆ, ಮರೆತೆನು ನಾ

ಹೂವಿನ ಹಾಸಿಗೆ ನೀ ಹಾಸಿ, ಮೋಹದಿ ನನ್ನನು ಕರೆದಾಗ 
ಮಾಡಿದೆ ನಾನು ಪರಿಹಾಸ, ನೀಡದೆ ನಿನಗೆ ಉಲ್ಲಾಸ

ಸವಿ ಇರುಳು ಹೊಂಗನಸ, ಮುರಿದೆನು ನಾ, ಆ, ಆ, ಆ, ಆ

ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ

ಮೇಘ ಸರಿದಾಗ, ತಾರೆ ಹೊಳೆದಾಗ
ಚಂದ್ರ ಮರೆಯಾದ, ನನ್ನ ತೊರೆದ

ಯಾರ ಬಳಿ ನಾನು ನೋವ ನುಡಿದೇನು
ಇನಿಯ ಮರೆತಾಗ, ಸಹಿಸೆನು ನಾ

ಬಾಳಿದು ಚಿಂತೆಯ ಪಾಲಾಗಿ, ದುಂಬಿಯ ಕಾಣದ ಹೂವಾಗಿ
ತಾಳೆನು ನಾನು ಏಕಾಂತ, ಬರುವೆ ನೀ ಎಂದು ಓ ಕಾಂತ

ಕೊರಗುತಿಹೆ, ಮರುಗುತಿಹೆ, ವಿರಹದಿ ನಾ, ಆ, ಆ, ಆ, ಆ

ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ

ನೀ ಶೃತಿಯ ಮಿಡಿದಾಗ, ಹಾಡಿದೆ ನಾ ಹುಸಿರಾಗ
ತೋರಿದೆ ನೀ ಅನುರಾಗ, ಗಮನಿಸದೆ ತೆರಳಿದೆ ನಾ
ಆ, ಆ, ಆ, ಆ, ಆಆ


Any other song you would like to see lyrics of? Just ask in the comments section below

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)