Song: Aalochane (ಆಲೋಚನೆ), Movie: Romeo (ರೋಮಿಯೋ)

ಹಾಡು: ಆಲೋಚನೆ
ರಚನೆ: ಕವಿರಾಜ್‌
ಸಂಗೀತ: ಅರ್ಜುನ್‌ ಜನ್ಯ
ಗಾಯನ: ಶ್ರೇಯ ಘೋಶಾಲ್‌
ಚಲನಚಿತ್ರ: ರೋಮಿಯೋ

ಆಲೋಚನೆ ಆರಾಧನೆ ಎಲ್ಲ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲ ನೀನೇನೆ

ನಾವಿಬ್ಬರು  ಒಂದಾದರೆ ಖಂಡಿತ
ಈ ಜೀವನ ಅಲ್ಲಿಂದಲೇ ಅದ್ಭುತ

ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಃ
ಯಾರೋ ನನಗೆ ನೀನು?

ಆಲೋಚನೆ ಆರಾಧನೆ ಎಲ್ಲ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲ ನೀನೇನೆ

ಆದಮೇಲೆ ನಂಗೆ ನಿನ್ನ ಪರಿಚಯ
ನನ್ನ ಬಾಳು ಆಯಿತಲ್ಲ ರಸಮಯ
ನಿಜದಲಿ ನೀನು, ಮನುಜನೊ ಗಾಂಧಾರನೋ?

ಸಾಕು ಸಾಕು ಇನ್ನು ನಿನ್ನ ಅಭಿನಯ
ನೋಡಿ ಕೂಡಲೋಡದಂತೆ ನಡಿಗೆಯ
ಹುಡುಗಿಯ ಹೀಗೆ, ಹೆದರಿಸಬೇಡ ಕಣೋ

ಅಂದು, ನೀನು, ಆಗಂತುಕ
ಇಂದು, ನೀನೇ, ನನ್ನ ಸಖ

ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಃ
ಯಾರೋ ನನಗೆ ನೀನು?

ಆಲೋಚನೆ ಆರಾಧನೆ ಎಲ್ಲ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲ ನೀನೇನೆ

ನಿನ್ನ ಕೆನ್ನೆ ಹಿಂಡುವಂತ ಸಲುಗೆಯ
ಬೇಗ ಬೇಗ ನಂಗೆ ನೀನು ಕೊಡುವೆಯ
ತಡೆದರೆ ಇನ್ನು, ತಡೆಯೆನು ನಾ ನನ್ನನು

ನಿಂಗೆ ತಾಗಿ ನಿಂತ ವೇಳೆ ತಳಮಳ
ಸೋನೆ ಸೋಕಿ ಹಾದ ಹಾಗೆ ಹಸಿನೆಲ
ಬೆವರುವೆ ಯಾಕೋ, ಅರಳುವೆ ನಾನೇತಕೋ

ಕೇಳೋ, ಆಸೆ, ಆಲಿಂಗನ
ಯಾಕೋ, ನಾಚಿ, ನೀರಾದೆ ನಾ

ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಃ
ಯಾರೋ ನನಗೆ ನೀನು?

ಆಲೋಚನೆ ಆರಾಧನೆ ಎಲ್ಲ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲ ನೀನೇನೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)