Song: Preethiya hesare neenu, (ಪ್ರೀತಿಯ ಹೆಸರೆ ನೀನು) Movie: Happy new year (ಹ್ಯಾಪಿ ನ್ಯೂ ಇಯರ್)
ಹಾಡು: ಪ್ರೀತಿಯ ಹೆಸರೆ ನೀನು
ರಚನೆ: ರಾಘವೇಂದ್ರ ಕಾಮತ್, ವಾಸುಕಿ ವೈಭವ್
ಸಂಗೀತ: ರಘು ದೀಕ್ಷಿತ್
ಗಾಯನ: ರಘು ದೀಕ್ಷಿತ್
ಚಲನಚಿತ್ರ: ಹ್ಯಾಪಿ ನ್ಯೂ ಇಯರ್
ಏನೋ ಇದು, ಹಾಯಾಗಿದೆ
ನೂರು ಕನಸಿಗೆ, ರಂಗೇರಿದೆ
ಸಣ್ಣ ಸಣ್ಣ ಆಸೆಗೆ, ಜೀವ ಬಂದಂತಿದೆ
ಇದ್ದಕದಕಿದ್ದ ಹಾಗೆ, ಖುಷಿ, ಕಣ್ತುಂಬಿದೆ
ತೇಲಾಡುತಾ ಆ, ಐಮ್ ಫಾಲಿನ್ ಇನ್ ಲವ್
ರೋಮಾಂಚನಾ ಆ, ಐಮ್ ಫಾಲಿನ್ ಇನ್ ಲವ್
ಸಂತೋಷದ, ಉಲ್ಲಾಸದ ಗೂಡಾದೆ ನಾ
ಪ್ರೀತಿಯ ಹೆಸರೆ ನೀನು
ಪ್ರತಿ ಕ್ಷಣ ಕಂಡಾಗ ನಿನ್ನನು
ಅದೇನೋ ಏನೊ ಏನೋ ಆಗಿದೆ
ಪದೇ ಪದೇ, ನನ್ನ ಹೆಜ್ಜೆ ದಾರಿ ತಪ್ಪಿ ನಿನ್ನನೇ, ಬಂದು ಸೇರಿದೆ
ಕಣ್ಣ ಕಣ್ಣ ಮಾತಿಗೆ, ಭಾಷೆಯೊಂದು ಏತಕೆ
ಇದ್ದಕದಕಿದ್ದ ಹಾಗೆ, ಖುಷಿ, ಕಣ್ತುಂಬಿದೆ
ತೇಲಾಡುತಾ ಆ, ಐಮ್ ಫಾಲಿನ್ ಇನ್ ಲವ್
ರೋಮಾಂಚನಾ ಆ, ಐಮ್ ಫಾಲಿನ್ ಇನ್ ಲವ್
ಸಂತೋಷದ, ಉಲ್ಲಾಸದ ಗೂಡಾದೆ ನಾ
ಪ್ರೀತಿಯ ಹೆಸರೆ ನೀನು
ದಿನಾ ದಿನಾ, ಬೇರೆಲ್ಲವನ್ನು ನೆನೆವೆ ನಾನು
ನಿನ್ನನು, ನೆನೆದ ನಂತರ
ಸತಾಯಿಸೋ, ಒಂದೊಂದು ಚಿಂತೆಗೀಗ
ನಿನ್ನಲೇ ಇದೆ, ಎಲ್ಲ ಉತ್ತರ
ದೂರ ದೂರವಾಗಲಿ, ಬೇರೆ ಎಲ್ಲ ಕಾಳಜಿ
ಪೂರ ಪೂರ ವಾಲಲಿ, ನಿನ್ನ ಕಡೆಗೆ ಮನ
ತೇಲಾಡುತಾ ಆ, ಐಮ್ ಫಾಲಿನ್ ಇನ್ ಲವ್
ರೋಮಾಂಚನಾ ಆ, ಐಮ್ ಫಾಲಿನ್ ಇನ್ ಲವ್
ಸಂತೋಷದ, ಉಲ್ಲಾಸದ ಗೂಡಾದೆ ನಾ
ಪ್ರೀತಿಯ ಹೆಸರೆ ನೀನು
ಪ್ರೀತಿಯ ಹೆಸರೆ ನೀನು, ಹ್ಮ್
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ