Song: Ninna Danigaagi (ನಿನ್ನ ದನಿಗಾಗಿ), Movie: Savaari 2 (ಸವಾರಿ 2)

ಹಾಡು:ನಿನ್ನ ದನಿಗಾಗಿ
ರಚನೆ: ಜಯಂತ್‌ ಕಾಯ್ಕಿಣಿ
ಸಂಗೀತ: ಮಣಿಕಾಂತ್‌ ಕದ್ರಿ 
ಗಾಯನ: ಕಾರ್ತಿಕ್‌, ಹಂಸಿಕ ಅಯ್ಯರ್
ಚಲನಚಿತ್ರ: ಸವಾರಿ 2


ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ
ತೀರ ಬಳಿ ಬಂದ ನೀನು ನನಗೊಂದು 
ಸೋಜಿಗದಂತೆ ಕಾಣುವೆ

ಒಂಟಿ ಇರುವಾಗ ಕುಂಟು ನೆಪ ತೋರಿ
ಬಂದ ಕನಸೆಲ್ಲ ನಿನ್ನದು
ನಾನು ಅನುರಾಗಿ ನೀನೆ ನನಗಾಗಿ
ಎನ್ನುವ ಭಾವನೆ ನನ್ನದು 

ಕಣ್ಣಿನಲ್ಲೇನೆ ಹೊಮ್ಮಿದೆ, ಕೋಮಲ ಕೋರಿಕೆ 
ಮುತ್ತಿನ ಅಂಕಿತ ಬೇಕಲ್ಲ ಒಪ್ಪಂದಕೆ

ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ
ತೀರ ಬಳಿ ಬಂದ ನೀನು ನನಗೊಂದು 
ಸೋಜಿಗದಂತೆ ಕಾಣುವೆ|

ಹೆದರುತ, ಅರಳಿವೆ, ನಾನಾ ಹಂಬಲ 
ನಿನ್ನನೇ ತಲುಪಲು

ಮನಸಲಿ, ಸವಿಗನಸಿನ, ಸಾಲೇ ನಿಂತಿದೆ
ಅಂಗಡಿ ತೆರೆಯಲು

ಎಲ್ಲೇ ನಾ ಹೋದರೂ, ಗಮನ ಇಲ್ಲೇ ಇದೆ
ಸನಿಹವೇ ನೀ ಬೇಕೆನ್ನುವ, ಹಠವೂ ಹೆಚ್ಚಾಗಿದೆ 
ಈಗ, ಚಂದ್ರನ ಒಪ್ಪಿಗೆ ಬೇಕೇನು ಸಲ್ಲಾಪಕೆ


ನೆನಪಿನ,  ಬೀದಿಯ, ಎಲ್ಲಾ ಗೋಡೆಗೂ
ನಿನ್ನದೇ ಮೊಗವಿದೆ

ಸಲಿಗೆಯ, ತಕರಾರಿನ, ಸಣ್ಣ ಕೋಪಕೂ 
ಬೇರೆಯೇ ಸುಖವಿದೆ

ಇನ್ನೂ ಇಂಪಾಗಿದೆ ಕರೆವ ನಿನ್ನ ಸ್ವರ
ಹೃದಯದಲಿ ಎಂದೆಂದಿಗೂ ಇರಲೀ ಹಸ್ತಾಕ್ಷರ 
ಬೇಗ ಮೂಡಲಿ ಮತ್ಸರ ಈ ಭೂಮಿ ಆಕಾಶಕೆ

ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ
ತೀರ ಬಳಿ ಬಂದ ನೀನು ನನಗೊಂದು 
ಸೋಜಿಗದಂತೆ ಕಾಣುವೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)