Song: Aakaashadinda (ಆಕಾಶದಿಂದ), Movie: Chandanada Gombe (ಚಂದನದ ಗೊಂಬೆ)

ಹಾಡು: ಆಕಾಶದಿಂದ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್‌ ನಾಗೇಂದ್ರ
ಗಾಯನ: ಎಸ್.‌ ಪಿ. ಬಾಲಸುಬ್ರಮಣ್ಯಂ
ಚಲನಚಿತ್ರ: ಚಂದನದ ಗೊಂಬೆ

ಆಕಾಶದಿಂದ ಧರೆಗಿಳಿದ ರಂಭೆ
ಇವಳೆ, ಇವಳೇ, ಚಂದನದ ಗೊಂಬೆ(೨)
ಚಲುವಾದ ಗೊಂಬೆ, ಚಂದನದಾ ಗೊಂಬೆ

ಬಂಗಾರದಿಂದ, ಬೊಂಬೆಯನು ಮಾಡಿದ
ಚಂದಿರನ ಕಾಂತಿಯ, ತನುವಲ್ಲಿ ತುಂಬಿದ

ತಾವರೆಯ ಅಂದ, ಕಣ್ಣಲ್ಲಿ ತಂದ
ಈ ಸಂಜೆ ಕೆಂಪನು, ಕೆನ್ನೆಯಲಿ ತುಂಬಿದ

ಆ ದೇವರೇ, ಕಾಣಿಕೆ ನೀಡಿದ
ನನ್ನ ಜೊತೆ ಮಾಡಿದ, ಆಹಾ!

ಆಕಾಶದಿಂದ ಧರೆಗಿಳಿದ ರಂಭೆ(೨)
ಇವಳೆ, ಇವಳೇ, ಚಂದನದ ಗೊಂಬೆ(೨)
ಚಲುವಾದ ಗೊಂಬೆ, ಚಂದನದಾ ಗೊಂಬೆ

ನಡೆವಾಗ ನಿನ್ನ, ಮೈಮಾಟವೇನು
ಆ ಹೆಜ್ಜೆ ನಾದಕೆ, ಮೈಮರೆತುಹೋದೆನು

ಕಣ್ಣಲ್ಲೆ ನೂರು ಹೊಂಗನಸು ಕಂಡೆನು
ಆ ಕನಸಿನಲ್ಲಿ, ನಾ ಕರಗಿ ಹೋದೆನು

ಆ ಹೂನಗೆ, ಕಂಡೆನು, ಸೋತೆನು
ನಿನ್ನ ಸೆರೆಯಾದೆನು, ಆಹಾ! 

ಆಕಾಶದಿಂದ ಧರೆಗಿಳಿದ ರಂಭೆ(೨)
ಇವಳೆ, ಇವಳೇ, ಚಂದನದ ಗೊಂಬೆ(೨)
ಚಲುವಾದ ಗೊಂಬೆ, ಚಂದನದಾ ಗೊಂಬೆ
ಚಂದನದಾ ಗೊಂಬೆ, ಚಂದನದಾ ಗೊಂಬೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)