Song: Maleyali minda (ಮಳೆಯಲಿ ಮಿಂದ), Movie: Andar Bahar (ಅಂದರ್‌ ಬಾಹರ್)

ಹಾಡು: ಮಳೆಯಲಿ ಮಿಂದ
ರಚನೆ: ಜಯಂತ್‌ ಕಾಯ್ಕಿಣಿ
ಸಂಗೀತ:ವಿಜಯ್ ಪ್ರಕಾಶ್
ಗಾಯನ: ವಿಜಯ್ ಪ್ರಕಾಶ್‌
ಚಲನಚಿತ್ರ: ಅಂದರ್‌ ಬಾಹರ್


ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೇ
ಕನಸಲಿ ಕಂಡ ದೇವರ ಹಾಗೆ
ಸೆಳೆಯುವೆ ಏಕೆ ನನ್ನೊಲವೇ

ಹೃದಯದ ಮಾತು ಆಲಿಸು ಪೂರ
ಕಂಪಿಸುವಾಗ ಈ ಕೊರಳು
ಚಿಂತೆಯು ಕೂಡ ನಿಂತಿದೆ ದೂರ
ಜೊತೆಯಲಿ ಜೀವವೆ ನೀನಿರಲು

ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೇ

ನಿನ್ನಯ ರೂಪದ ರೇಖೆಯಲಿ, ಉಸಿರಿನ ಬಣ್ಣ ತುಂಬುವೆನು
ನನ್ನನು ನಾನೇ ನಂಬದೆಯೇ, ಕೇವಲ ನಿನ್ನನೆ ನಂಬುವೆನು

ನಗೆಹೂವನು ಮುಡಿಸುತ ಈ ಕ್ಷಣವೇ
ಶುರುವಾಗಿಯೆ ಹೋಯುತು ಜೀವನವೇ

ಓ ನೀನಿರೊ ತನಕ ನಾನಿರುವೆ

ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೇ

ಮೈಮನದಲ್ಲಿ ಸಡಗರವ, ಬಚ್ಚಿಡಲಾಗದೆ ಸೋತಿರುವೆ
ನಿನ್ನಯ ಹಾಡಿನ ಸಾಲಿನಲಿ, ಅಚ್ಚರಿಯಿಂದಲೆ ಕೂತಿರುವೆ

ನಿನ್ನ ರೂಪವ ತಾಳುತ ಈ ಜಗವು
ಅಪರೂಪದ ಸುಂದರ ಸೋಜಿಗವು

ನೀನಿರುವಲ್ಲೇ ನಾನಿರುವೆ

ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೇ
ಕನಸಲಿ ಕಂಡ ದೇವರ ಹಾಗೆ
ಸೆಳೆಯುವೆ ಏಕೆ ನನ್ನೊಲವೇ

ಹೃದಯದ ಮಾತು ಆಲಿಸು ಪೂರ
ಕಂಪಿಸುವಾಗ ಈ ಕೊರಳು
ಚಿಂತೆಯು ಕೂಡ ನಿಂತಿದೆ ದೂರ
ಜೊತೆಯಲಿ ಜೀವವೆ ನೀನಿರಲು




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

Song: Hesaru poorthi helade, Movie: Paramathma

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)