ನಿಗೂಢ, ನಿಗೂಢ ಕೊರೋನ (Nigooda Corona). Corona song

ಕೊರೋನ ವಿಶ್ವವ್ಯಾಪಿಯಾಗಿರುವ ಹಿನ್ನಲೆಯಲ್ಲಿ ಯೋಚಿಸುತ್ತ ಕವಲುದಾರಿಯ ನಿಗೂಢ ಪ್ರಯಾಣ ಹಾಡು ಕಾಡುತ್ತಿತ್ತು. ಇದರಿಂದ ಸ್ಫೂರ್ತಿಗೊಂಡು ಕೊರೋನ ಸಾಹಿತ್ಯ ಅಳವಡಿಸಲು ಮಾಡಿರುವ ಪ್ರಯತ್ನ. ನೋಡಿ, ಹಾಡಿ, ಸಾಧ್ಯವಾದರೆ ನಿಮ್ಮದೂ ಸಾಹಿತ್ಯ ಸೇರಿಸಿಕೊಳ್ಳಿ

ನಿಗೂಢ, ನಿಗೂಢ ಕೊರೋನ
ಯಾವಾಗೋ ಕಾಣೋದು, ಕೊನೇನಾ?
ನಿಗೂಢ, ನಿಗೂಢ, ಕೊರೋನ
ಕೊನೇನ, ಕಾಣೋದು, ನಿಜಾನಾ?

ಗಾಯಬ್ಬಾದ ರಾಶಿ ರಾಶಿ ಜನರು ಸಾವು ಸಿಕ್ಕಿ ನರಳುತಿಹರು
ವೈದ್ಯರಿಗೆ ಗಾಯ, ಈ ಗಾಯ
ಜೀವಕಿಲ್ಲಿದೆ ಅಪಾಯ

ಉಳ್ಳ ಜನರು ಹಾರಿ ಹಾರಿ ಹಾರಿ
ತಂದೇ ತಂದರು  ಮಹಮಾರಿ
ಅವರೇನಾ  ರೂವಾರಿ, ರೂವಾರಿ, ರೂವಾರಿ

ಜೀವ ಉಳಿಸೋ ಪರಿಹಾರ, ಮನೆಯೊಂದೆ ಆಧಾರ
ಮನೆಯಿಂದ ಹೊರಬರಲು, ಕಾದಿರುವ ಜವರಾಯ

ಚೀನಾದ ಒಡಲಲ್ಲಿ, ಕಾಯುತ್ತ ಕುಂತಿತ್ತು
ಜನರಿಂದ ಜನರಲ್ಲಿ ಕಾಣಿಸದೆ ಹರಡಿತ್ತು
ದೂರ, ದೂರ, ವಿಸ್ತಾರ

ನಿಗೂಢ, ನಿಗೂಢ, ಕೊರೋನ
ಕೊನೇನ, ಕಾಣೋದು, ನಿಜಾನಾ?

ನಾವ್ಯಾರೀಗ, ನಾವ್ಯಾರೀಗ
ಕಣ್ಣೆದುರಲ್ಲೇ ಮರೆಯಾದಾಗ
ಕಳೆದಾ ಶ್ವಾಸ, ಕಳೆದಾ ಮಿಡಿತ
ಉಸಿರಾ ಕದಿಯೋ ಅಣುವು ಸೇರಿ{೨}


ತಿಳಿದ ವೈದ್ಯರ ಸೊಲ್ಲಡಗಿಸಿದ
ತಪ್ಪಿನ ಫಲವೇ ಈ ಅವಸಾನ
ಅಂತರ ಕಾಯದ ಮನುಜಕುಲಾನ
ಜೀವಂತ ಕಾಣೋದೇ ಕಠಿಣ

ಕ್ಷಣ, ಕ್ಷಣ, ಪ್ರತೀ ಕ್ಷಣ
ಕುಸಿಯುತ್ತಿರೋ ಜನ ಮನ
ವಿಜ್ನಾನಕೆ ಸವಾಲಿದು
ಅಣು, ಕಣ ಜೀವಿಯಿಂದ

ಜೀವ ಉಳಿಸೋ ಪರಿಹಾರ, ಮನೆಯೊಂದೆ ಆಧಾರ
ಮನೆಯಿಂದ ಹೊರಬರಲು, ಕಾದಿರುವ ಜವರಾಯ

ಚೀನಾದ ಒಡಲಲ್ಲಿ, ಕಾಯುತ್ತ ಕುಂತಿತ್ತು
ಜನರಿಂದ ಜನರಲ್ಲಿ ಕಾಣಿಸದೆ ಹರಡಿತ್ತು
ದೂರ, ದೂರ, ವಿಸ್ತಾರ

ನಾವ್ಯಾರೀಗ, ನಾವ್ಯಾರೀಗ
ಕಣ್ಣೆದುರಲ್ಲೇ ಮರೆಯಾದಾಗ
ಕಳೆದಾ ಶ್ವಾಸ, ಕಳೆದಾ ಮಿಡಿತ
ಉಸಿರಾ ಕದಿಯೋ ಅಣುವು ಸೇರಿ{೨}



  
  



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)