Song: Aaramagi idde naanu (ಆರಾಮಾಗಿ ಇದ್ದೆ ನಾನು), Movie: Gokula (ಗೋಕುಲ)

ಹಾಡು: ಆರಾಮಾಗಿ ಇದ್ದೆ ನಾನು
ರಚನೆ: ಜಯಂತ್‌ ಕಾಯ್ಕಿಣಿ
ಸಂಗೀತ: ಮನೋಮೂರ್ತಿ 
ಗಾಯನ: ಸೋನು ನಿಗಂ, ಶ್ರೇಯ ಘೋಶಾಲ್
ಚಲನಚಿತ್ರ: ಗೋಕುಲ


ಆರಾಮಾಗಿ, ಇದ್ದೆ ನಾನು 
ನಿನ್ನ ಕಂಡು, ಅರೆ ಏನಾಯಿತು?
ಅರೆ ಏನಾಯಿತು? ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರುಮಾತಾಡದೆ, ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು{೨}

ಆರಾಮಾಗಿ, ಇದ್ದೆ ನಾನು 
ನಿನ್ನ ಕಂಡು, ಅರೆ ಏನಾಯಿತು?

ನೆನೆಯುತ, ಬರಿದೆ ನೆನೆಯುತ
ಮನ ಇನ್ನೂನು ಭಾವುಕವಾಯಿತು
ಬಯಸುತ, ಒಲವ ಬಯಸುತ,
ಕ್ಷಣ ಒಂದೊಂದು ರೋಚಕವಾಯಿತು

ಹೋ, ನಾನು ನೀನು, ಕೂತುಕೊಂಡ ಜಾಗ
ನಮ್ಮ ಮಾತೇ ಆಡುತಾವೆ ಈಗ

ಪಿಸುಮಾತಾಡುತ, ಅರೆ ಏನಾಯಿತು?
ಸವಿಕನಸೊಂದು ಜೀವಂತವಾಯಿತು

ಆರಾಮಾಗಿ, ಇದ್ದೆ ನಾನು 
ನಿನ್ನ ಕಂಡು, ಅರೆ ಏನಾಯಿತು?

ಮರೆಯಿತು, ಹೆಸರೆ ಮರೆಯಿತು
ಈ ಮುದ್ದಾದ ಮೋರೆಯ ನೋಡುತ
ಹೊರಟಿತು, ಹೃದಯ ಹೊರಟಿತು,
ನೀನಿದ್ದಲ್ಲೆ ಡೇರೆಯ ಹೂಡುತ

ಕಾಣದಂತೆ ಓಡಿ ಬಂದೆ ಏನು?
ಕಾಡಿದಷ್ಟೂ ಪ್ರೀತಿ ಚಂದವೇನು?

ಜತೆ ಓಡಾಡುತ, ಅರೆ ಏನಾಯಿತು?
ಈ ಬಡಜೀವ ಶ್ರೀಮಂತವಾಯಿತು

ಆರಾಮಾಗಿ, ಇದ್ದೆ ನಾನು 
ನಿನ್ನ ಕಂಡು, ಅರೆ ಏನಾಯಿತು?
ಅರೆ ಏನಾಯಿತು? ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರುಮಾತಾಡದೆ, ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು{೨}

ಆರಾಮಾಗಿ, ಇದ್ದೆ ನಾನು 
ನಿನ್ನ ಕಂಡು, ಅರೆ ಏನಾಯಿತು?

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)