Song: Naanu Hottare edbuttu (ನಾನು ಒತ್ತಾರೆ ಎದ್ಬುಟ್ಟು), Movie: Rishi (ರಿಷಿ)

ಹಾಡು: ನಾನು ಒತ್ತಾರೆ ಎದ್ಬುಟ್ಟು
ರಚನೆ: ವಿ. ಮನೋಹರ್
ಸಂಗೀತ:‌ ಗುರುಕಿರಣ್ 
ಗಾಯನ: ರಾಜು ಅನಂತ್‌ಸ್ವಾಮಿ, ಅನುರಾಧಾ, ಗುರುಕಿರಣ್ 
ಚಲನಚಿತ್ರ: ರಿಷಿ

ನಾನು ಒತ್ತಾರೆ ಎದ್ಬುಟ್ಟು, ನಿನ್‌ ಮೋರೆ ನೋಡ್ಬುಟ್ಟು
ಕೈ ಜೋಡ್ಸಿ ನಿಲ್ತಿನ್‌ ಕಣೆ
ಬೇಗ ಬೆಡ್‌ ಕಾಫಿ ತಂದ್ಬುಟ್ಟು, ನಿನ್‌ ಕಾಲ ಒತ್ಬುಟ್ಟು
ಬಗ್‌ ಬಗ್ಸಿ ಕೊಡ್ತಿನ್‌ ಕಣೆ

ಕಾಫಿ ಸೀಗಿಲ್ಲ ಅಂತ ನೀ ಒದ್ಬುಟ್ರೆ ನಿನ್‌ ಬೆಳ್ಳ ಕಪ್ಪಲ್ಲಿ ಅದ್ತಿನ್‌ ಕಣೆ
ಈ ಸಕ್ರೆಯ ಗೊಂಬೆಗೆ ಸಕ್ಕರೆ ಯಾಕಂತ ಅಂದ್ಬುಟ್ಟು ಗಿಂಜ್ತೀನ್‌ ಕಣೇ

ಐ ಲವ್‌ ಯು ಲವ್‌ ಯು ಡಾ, ಐ ರೀಲಿ ಲವ್‌ ಯು ಡಾ, ಐ ಟ್ರೂಲಿ ಲವ್‌ ಯು ಡಾಲ್‌, ಏ ಹೇ


ನಿಂಗೆ ಒಳ್ಳೆಣ್ಣೇ ಹಚ್ಬುಟ್ಟು, ಮೈ ಎಲ್ಲ ನೀವ್ಬುಟ್ಟು, ನೆಟ್ಗೆ ತೆಗಿತಿನ್‌ ಕಣೇ
ಜಳಕ ಮಾಡ್ಸುತ್ತ ಮಾಡ್ಸುತ್ತ ಬೆಳ್‌ ಬೆಳ್ನೆ ಬೆನ್ನನ್ನ ಮುದ್ದಾಡ್ತ ತಿಕ್ತೀನ್‌ ಕಣೇ

ಕೀರು ಉಪ್ಪಿಟ್ಟು ಒಬ್ಬಟ್ಟು ನಿಪ್ಪಟ್ಟು ತಂಬಿಟ್ಟು ಎಲ್ಲಾ ನಾ ಮಾಡ್ತಿನ್‌ ಕಣೇ
ನಿನ್ನ ಮಡ್ಲಲ್ಲಿ ಕೂರ್ಸ್ಕೊಂಡು, ಸೊಂಟನ ತಬ್ಕೊಂಡು ತುತ್ತುತು ತಿನ್ಸ್ತಿನ್‌ ಕಣೇ

ಐ ಲವ್‌ ಯು ಲವ್‌ ಯು ಡಾ, ಐ ಡಿಯರ್ಲಿ ಲವ್‌ ಯು ಡಾ, ಐ ಟ್ರೂಲಿ ಲವ್‌ ಯು ಡಾ, ಏ ಹೇ


ಆಹಾ ಸಂತೆಗೆ ಕರ್ಕೊಂಡು, ಸೀರೆಯ ಕೊಂಡ್ಕೊಂಡು, ನಿಂಗುಡ್ಸಿ ನೋಡ್ತಿನ್‌ ಕಣೆ
ಅಲ್ಲಿ ತೊಟ್ಲಲ್ಲಿ ಕುಂತ್ಕಂಡು, ಮಂಡಕ್ಕಿ ತಿನ್ಕಂಡು, ಎತ್ಕಂಡೇ ಬತ್ತಿನ್ ಕಣೇ

ಆಹಾ ಬೆಳದಿಂಗಳ್‌ ರಾತ್ರೇಲಿ, ಮುಂಜಾನೆ ಜೋಕಾಲಿ, ಅಂಗ್ಳನೇ ಮಲಗೋ ಕೋಣೆ
ಇಂಥ ಮುಂಗೋಪ ಬುಟ್ಬುಟ್ಟು, ಇನ್ನಾದ್ರೂ ನಂಬುಟ್ಟು ಬಾ ಬಾರೇ ನನ್ನ ಜಾಣೆ

ಐ ಲವ್‌ ಯು ಲವ್‌ ಯು ಡಾ, ಐ ರೀಲಿ ಲವ್‌ ಯು ಡಾ, ಐ ಟ್ರೂಲಿ ಲವ್‌ ಯು ಡಾ, ಏ ಹೇ

  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)