Song: Saviyo saviyu (ಸವಿಯೋ ಸವಿಯು), Movie: Savi savi nenapu (ಸವಿ ಸವಿ ನೆನಪು)

ಹಾಡು: ಸವಿಯೋ ಸವಿಯು
ರಚನೆ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ ಆರ್.‌ ಪಿ. ಪಟ್ನಾಯಕ್
ಗಾಯನ: ಸೋನು ನಿಗಮ್‌, ಶ್ರೇಯ ಘೋಶಾಲ್
ಚಲನಚಿತ್ರ: ಸವಿ ಸವಿ ನೆನಪು
ಸವಿಯೋ, ಸವಿಯು, ಒಲವಾ ನೆನಪು
ಎದೆಯಾ ನಿಧಿಯೇ ಅನುರಾಗ 

ಸವಿಯೋ, ಸವಿಯು, ಒಲವಾ ನೆನಪು
ಎದೆಯಾ ನಿಧಿಯೇ ಅನುರಾಗ

ಪ್ರತಿಕ್ಷಣದಲಿ, ಪ್ರಾರ್ಥನೆಯಲಿ, ಕಾಡುವೆ ಏತಕೆ
ಪ್ರತಿಕ್ಷಣದಲಿ, ಪ್ರಾರ್ಥನೆಯಲಿ, ಕಾಡುವೆ ಏತಕೆ

ಸೂರ್ಯನಂತೆ ನಾ ಹೊಳೆವಾಗ
ಭೂಮಿಯಂತೆ ನೀ ಬಾ

ಭೂಮಿಯಂತೆ ನಾ ಕರೆವಾಗ
ಮಳೆಬಿಲ್ಲಂತೆ ನೀ ಬಾ

ಸವಿಯೋ, ಸವಿಯು, ಒಲವಾ ನೆನಪು
ಎದೆಯಾ ನಿಧಿಯೇ ಅನುರಾಗ 

ನೀ ಬರುವ ದಾರಿಯಲ್ಲಿ, ಒಲವೆಂಬ ರಂಗವಲ್ಲಿ
ನಿನಗಾಗಿ ಮೂಡಿದೆ ನೋಡು ಬಾ

ಹೇ ಹೇ ಹೇ

ಒಡಲಾಳ ತಂತು ಸ್ನೇಹ, ಒಡಮೂಡಿ ಬಂತು ಮೋಹ
ಕತೆಯಾಗಿ ಕಾಡಿತು ಮೂಡಿತು

ಆ ಗದ್ಯಗೊಳದ್ದಿದ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೇ
ನೀ ಗದ್ಯಗೊಳದ್ದಿದ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೇ

ಸವಿಯೋ, ಸವಿಯು, ಒಲವಾ ನೆನಪು
ಎದೆಯಾ ನಿಧಿಯೇ ಅನುರಾಗ 

ಮರುಭೂಮಿ ಯಾನದಲ್ಲಿ, ಅಮ್ರತದ ಧಾರೆ ಚಲ್ಲಿ
ತಂಪಾಯ್ತು ಜೀವಕೆ ಭಾವಕೆ

ಹಾ ಹಾ ಹಾ

ಮುಂಜಾನೆ ಮಂಜಿನಲ್ಲೂ, ಚುಮುಗುಡುವ ಬೆಳಗಿನಲ್ಲೂ
ಬಿಸಿಯಾಯ್ತು ಮೈಯಿಗೂ ಮನಸಿಗೂ 

ಹೇ ಹೇ ಏ

ನೀ ಬೆಚ್ಚನೆ ಪ್ರೀತೀಯ ಹುಚ್ಚಿನ ಮೆಚ್ಚಿನ ಇಚ್ಛೆಯ ಹೆಣ್ಣಲ್ಲವೇ
ನೀ ಬೆಚ್ಚನೆ ಪ್ರೀತೀಯ ಹುಚ್ಚಿನ ಮೆಚ್ಚಿನ ಇಚ್ಛೆಯ ಗಂಡಲ್ಲವೇ 

ಸವಿಯೋ, ಸವಿಯು, ಒಲವಾ ನೆನಪು
ಎದೆಯಾ ನಿಧಿಯೇ ಅನುರಾಗ 

ಹೋ ಓ ಓ
ಸವಿಯೋ, ಸವಿಯು, ಒಲವಾ ನೆನಪು
ಎದೆಯಾ, ನಿಧಿಯೇ ಅನುರಾಗ 

ಪ್ರತಿಕ್ಷಣದಲಿ, ಪ್ರಾರ್ಥನೆಯಲಿ, ಕಾಡುವೆ ಏತಕೆ
ಹೋ, ಪ್ರತಿಕ್ಷಣದಲಿ, ಪ್ರಾರ್ಥನೆಯಲಿ, ಕಾಡುವೆ ಏತಕೆ

ಸೂರ್ಯನಂತೆ ನಾ ಹೊಳೆವಾಗ
ಭೂಮಿಯಂತೆ ನೀ ಬಾರೇ

ಭೂಮಿಯಂತೆ ನಾ ಕರೆವಾಗ
ಮಳೆಬಿಲ್ಲಂತೆ ನೀ ಬಾರೋ

ಸವಿಯೋ, ಸವಿಯು, ಒಲವಾ ನೆನಪು
ಎದೆಯಾ, ನಿಧಿಯೇ ಅನುರಾಗ 









ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)