Song: Ide dina (ಇದೇ ದಿನ), Movie: kavaludaari (ಕವಲುದಾರಿ)

ಹಾಡು: ಇದೇ ದಿನ
ರಚನೆ: ಧನಂಜಯ್‌ ರಂಜನ್
ಸಂಗೀತ: ಚರಣ್‌ ರಾಜ್
ಗಾಯನ: ಸಿದ್ಧಾಂತ್‌ ಸುಂದರ್
ಚಲನಚಿತ್ರ:‌ ಕವಲುದಾರಿ

ಇದೇ ದಿನ, ಆ ನೆನ್ನೆ ನಾಳೆ
ಈ ಖಾಲಿ, ಹಾಳೆ
ಅದೇ, ಥರಾನೇ, ಆ ನೆನಪ ನೆನೆದು ಜೀವ ಜಾರಿದೆ

ಸಾಗೋ, ದಾರಿ ಎಲ್ಲೋ,
ತಿರುವಲ್ಲೇ ನಿಂತಿದೆ, ನಡುವಲ್ಲೆ ನಿಂತಿದೆ 

ಇದೇ ದಿನ, ಆ ನೆನ್ನೆ ನಾಳೆ
ಈ ಖಾಲಿ, ಹಾಳೆ

ದೂರದ ಭಾಸಕೆ, ಮಾಸದ ನೋವಿದೆ
ವಿಷಯ ನಶೆಯಂತಿರಲು, ಎಲ್ಲ ಅದಲು ಬದಲು

ಇಂತಹ ಪ್ರಶ್ನೆಗೆ, ಸಿಗದಾಗ ಸುಳಿವು

ನಿನ್ನನೇ ಕಾಡುವ, ಕಾರಣ ಕೇಳುವ
ಕಾಣದನ್ನು ಕಾಣಲೆಂದು ಹೋದರೆ

ಸಿಕ್ಕರೂ ಸಿಲುಕದು, ನೆರಳಿನಾಟ ಅಂಥದ್ದು
ದಾರಿ ನೀನೆ ತೋರಿಕೊಂಡು ಹೋದರೂ

ಹುಡುಕುವಾಗ ಬಾಳು, ಹೋದಲೆಲ್ಲ ಮುಳ್ಳು
ಹೆಜ್ಜೆಜ್ಜೆಗೂನು ಎಚ್ಚರಿಕೆ ಇದ್ದರೂ
ನೀ ಭೇದಿಸೋಕೆ ಬೇಲಿ ಮೊದಲು ತಿಳಿದಿರು

ಇದೇ ದಿನ, ಆ ನೆನ್ನೆ ನಾಳೆ
ಈ ಖಾಲಿ, ಹಾಳೆ
ಅದೇ, ಥರಾನೇ, ಆ ನೆನಪ ನೆನೆದು ಜೀವ ಜಾರಿದೆ

ಜಾರಿದೇ, ಜೀವ ಜಾರಿದೆ
ನೆನಪಾ ನೆನೆದು

ನಿನ್ನಾ ನೀ, ಸುಡುತಾ, ನೋವಲ್ಲಿ ಹಿಂಡುತ್ತ
ಎಲ್ಲಿ ಯಾರಿಗಾಗಿ ನೀನು ಬಾಳುವೆ
ನಿನ್ನ ನೀ ಕ್ಷಮಿಸುತ್ತ, ಸರಿ-ತಪ್ಪನ್ನು ತೂಗುತ್ತ
ಮುಂದೆ ಹೋಗುವಲ್ಲೆ ಒಂದು ದಿಕ್ಕಿದೆ{೨}

ಕಣ್ಣಾ, ನೀರಿನಲ್ಲಿ, ನೂರೊಂದು ಕಥೆಯಿದೆ
ಕೊನೆ ಏನು? ಅಂತಿದೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)