Song: Savi savi nenapu (ಸವಿ ಸವಿ ನೆನಪು), Movie: My Autograph (ಮೈ ಆಟೋಗ್ರಾಫ್‌)

ಹಾಡು: ಸವಿ ಸವಿ ನೆನಪು
ರಚನೆ: ಕೆ. ಕಲ್ಯಾಣ್‌
ಸಂಗೀತ: ಭಾರದ್ವಾಜ್‌
ಗಾಯನ: ಹರಿಹರನ್‌
ಚಲನಚಿತ್ರ: ಮೈ ಆಟೋಗ್ರಾಫ್‌


ಸವಿ ಸವಿ ನೆನಪು ಸಾವಿರ ನೆನಪು
ಸಾವಿರ ಕಾಲಕು ಸವೆಯದ ನೆನಪು
ಎದೆಯಾಳದಲಿ ಬಚ್ಚಿಕೊಂಡಿರುವ
ಅಚ್ಚಳಿಯದ ನೂರೊಂದು ನೆನಪು


ಸವಿ ಸವಿ ನೆನಪು ಸಾವಿರ ನೆನಪು
ಸಾವಿರ ಕಾಲಕು ಸವೆಯದ ನೆನಪು
ಎದೆಯಾಳದಲಿ ಬಚ್ಚಿಕೊಂಡಿರುವ
ಅಚ್ಚಳಿಯದ ನೂರೊಂದು ನೆನಪು


ಏನೋ ಒಂದು ತೊರೆದ ಹಾಗೆ
ಯಾವುದೊ ಒಂದು ಪಡೆದ ಹಾಗೆ
ಅಮ್ಮನ ಮಡಿಲ ಅಪ್ಪಿದ ಹಾಗೆ
ಕಣ್ಣಂಚಲ್ಲಿ, ಕಣ್ಣೀರ ನೆನಪು


ಸವಿ ಸವಿ ನೆನಪು, ಸವಿ ಸವಿ ನೆನಪು ಸಾವಿರ ನೆನಪು
ಮೊದಮೊದಲ್‌ ಹಿಡಿದ ಬಣ್ಣದ ಚಿಟ್ಟೆ
ಮೊದಮೊದಲ್‌ ಕದ್ದ ಜಾತ್ರೆಯ ವಾಚು
ಮೊದಮೊದಲ್‌ ಸೇದಿದ ಗಣೇಶ ಬೀಡಿ


ಮೊದಮೊದಲ್‌ ಕೂಡಿಟ್ಟ ಹುಂಡಿಯ ಕಾಸು
ಮೊದಮೊದಲ್‌ ಕಂಡ ಟೂರಿಂಗ್‌ ಸಿನಿಮಾ
ಮೊದಮೊದಲ್‌ ಗೆದ್ದ ಕಬಡಿ ಆಟ


ಮೊದಮೊದಲಿದ್ದ ಹಳ್ಳಿಯ ಗರಿಮನೆ
ಮೊದಮೊದಲ್‌ ತಿಂದ ಕೈ ತುತ್ತೂಟ
ಮೊದಮೊದಲಾಡಿದ ಚುಕುಬುಕು ಪಯಣ
ಮೊದಮೊದಲಳಿಸಿದ ಗೆಳೆಯನ ಮರಣ


ಸವಿ ಸವಿ ನೆನಪು, ಸವಿ ಸವಿ ನೆನಪು ಸಾವಿರ ನೆನಪು
ಮೊದಮೊದಲ್‌ ಕಲಿತ ಅರೆಬರೆ ಈಜು
ಮೊದಮೊದಲ್‌ ಕೊಂಡ ಹೀರೋ ಸೈಕಲ್‌
ಮೊದಮೊದಲ್‌ ಕಲಿಸಿದ ಕಮಲ ಟೀಚರ್‌


ಮೊದಮೊದಲ್‌ ತಿಂದ ಅಪ್ಪನ ಏಟು
ಮೊದಮೊದಲ್‌ ಆದ ಮೊಣಕೈ ಗಾಯ
ಮೊದಮೊದಲ್‌ ತೆಗೆಸಿದ ಕಲರ್‌ ಕಲರ್‌ ಫೋಟೋ


ಮೊದಮೊದಲಾಗಿ ಚಿಗುರಿದ ಮೀಸೆ
ಮೊದಮೊದಲಾಗಿ ಮೆಚ್ಚಿದ ಹೃದಯ
ಮೊದಮೊದಲ್‌ ಬರೆದ ಪ್ರೇಮದ ಪತ್ರ
ಮೊದಮೊದಲಾಗಿ ಪಡೆದ ಮುತ್ತು
ಮುತ್ತು ಮುತ್ತು ಮುತ್ತು ಮುತ್ತು 


ಸವಿ ಸವಿ ನೆನಪು, ಸವಿ ಸವಿ ನೆನಪು ಸಾವಿರ ನೆನಪು(೨)








ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)