Song: Omkaradi (ಓಂಕಾರದಿ), Movie: Nammoora mandara hoove (ನಮ್ಮೂರ ಮಂದಾರ ಹೂವೇ)

ಹಾಡು: ಓಂಕಾರದಿ
ರಚನೆ: ಎಂ.ಎಸ್.‌ ಪಾಟೀಲ್
ಸಂಗೀತ: ಇಳಯರಾಜ
ಗಾಯನ: ಚಿತ್ರ
ಚಲನಚಿತ್ರ: ನಮ್ಮೂರ ಮಂದಾರ ಹೂವೇ


ಓಂಕಾರದಿ ಕಂಡೆ ಪ್ರೇಮನಾದವ 
ಈ ತಾಣದಿ ತಂದೆ ನೀ ಶುಭೋದಯ


ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ
ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ


ಅರಿಯೋ ಇನಿಯಾ, ಒಲವಾ ಕರೆಯಾ


ಓಂಕಾರದಿ ಕಂಡೆ ಪ್ರೇಮನಾದವ 
ಈ ತಾಣದಿ ತಂದೆ ನೀ ಶುಭೋದಯ


ಮಧುರ ತಾನ ಸ್ವರಗಳ ಸೇರಿ,
ಒಹೊಹೊಹೊಹೋ, ಒಹೊಹೊಹೊಹೋ


ಜಲಲ ದಾರೆ, ಜಲದಲಿ ಜಾರಿ 
ಒಹೊಹೊಹೊಹೋ, ಒಹೊಹೊಹೊಹೋ


ಆಕಾಶದಾಚೆ, ಆ ಮೌನದಿ
ಆ ತಾರೆ ಏಕೆ, ತಾ ತೇಲಿದೆ


ಬಂದಾಗ ಅರಿವು ಇಲ್ಲಿ, ತಂದಿತು ಒಲವು ಅಲ್ಲಿ


ಅರಿಯೋ ಇನಿಯಾ, ಒಲವಾ ನಿಧಿಯಾ


ಓಂಕಾರದಿ ಕಂಡೆ ಪ್ರೇಮನಾದವ 
ಈ ತಾಣದಿ ತಂದೆ ನೀ ಶುಭೋದಯ


ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ
ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ


ಅರಿಯೋ ಇನಿಯಾ, ಒಲವಾ ಕರೆಯಾ


ಓಂಕಾರದಿ ಕಂಡೆ ಪ್ರೇಮನಾದವ 


ನಿನದೇ ಗಾನ, ಹೃದದಯದಿ ತೇಲಿ
ಒಹೊಹೊಹೊಹೋ, ಒಹೊಹೊಹೊಹೋ


ಲಯದಿ ರಾಗ, ಅಲೆಗಳ ಬೀರಿ
ಒಹೊಹೊಹೊಹೋ, ಒಹೊಹೊಹೊಹೋ


ಈ ಗೀತೆಗಾದೆ ನೀ ಭಾವನಾ
ಈ ಬಾಳಿಗಾದೆ ನೀ ಚೇತನ
ಸಂಗೀತ ಸುಧೆಯ ತುಂಬಿ,
ಮಾಧುರ್ಯ ಮನದಿ ತಂದೆ


ಅರಿಯೋ ಇನಿಯಾ, ಒಲವಾ ಸವಿಯಾ


ಓಂಕಾರದಿ ಕಂಡೆ ಪ್ರೇಮನಾದವ 
ಈ ತಾಣದಿ ತಂದೆ ನೀ ಶುಭೋದಯ


ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ
ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ


ಅರಿಯೋ ಇನಿಯಾ, ಒಲವಾ ಕರೆಯಾ


ಓಂಕಾರದಿ ಕಂಡೆ ಪ್ರೇಮನಾದವ 
ಈ ತಾಣದಿ ತಂದೆ ನೀ ಶುಭೋದಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)