Song: Mouna thalithe (ಮೌನ ತಾಳಿತೆ), Movie: Ninnindale (ನಿನ್ನಿಂದಲೇ)

ಹಾಡು: ಮೌನ ತಾಳಿತೆ
ರಚನೆ: ಜಯಂತ್‌ ಕಾಯ್ಕಿಣಿ
ಸಂಗೀತ: ಮಣಿಶರ್ಮ
ಗಾಯನ: ಅರ್ಜಿತ್‌ ಸಿಂಗ್‌
ಚಲನಚಿತ್ರ: ನಿನ್ನಿಂದಲೇ

ಮೌನ ತಾಳಿತೆ ದಾರಿ
ನನ್ನ ಹೆಜ್ಜೆ ಸಪ್ಪಳ ಕೇಳಿ
ಮೋಡ ಹೋಯಿತೆ ಹಾರಿ
ಸಣ್ಣ ಗಾಳಿ ಮಾತನು ಕೇಳಿ

ಬದಲಾಯಿತೇನು ಕಣ್ಣ ಹೊಳಪು
ಸಿಗದಾಯಿತೇನು ನನ್ನ ಗುರುತು
ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ

ಮೌನ ತಾಳಿತೆ ದಾರಿ
ನನ್ನ ಹೆಜ್ಜೆ ಸಪ್ಪಳ ಕೇಳಿ
ಮೋಡ ಹೋಯಿತೆ ಹಾರಿ
ಸಣ್ಣ ಗಾಳಿ ಮಾತನು ಕೇಳಿ

ಕಲೆತು ಆಡಿದ ಸಾವಿರ ಸವಿಮಾತಿನ ಬಿಸಿ ಆರಿತೇ
ಸಲಿಗೆ ತೋರಿದ ಸ್ನೇಹವು ಹುಡುಗಾಟದ ಹಠವಾಯಿತೇ

ಕುಶಲ ಕೇಳುತಿವೆ, ನಡೆದ ದಾರಿಗಳು
ಅಳಿಸಲಾಗುವುದೇ, ಹಸಿಯ ಗೋಡೆಯ ಗೀಚಿದ ಸಾಲು

ಬದಲಾಯಿತೇನು ಕಣ್ಣ ಹೊಳಪು
ಸಿಗದಾಯಿತೇನು ನನ್ನ ಗುರುತು
ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ

ಕರಗಲಾರದೆ ಹೋದೆನೇ ಪದವಿಲ್ಲದ ಪರಿಭಾಷೆಗೆ
ಅರಳಬಲ್ಲೆನೇ ಈಗಲೂ ಎದೆಯಾಳದ ಅಭಿಲಾಷೆಗೆ

ಹಿಡಿದು ನಿಲ್ಲಿಸಿವೆ, ಕಡೆಯ ಮಾತುಗಳು 
ತಡೆಯಲಾಗುವುದೇ, ಎದೆಯ ಬಾಗಿಲ ತಟ್ಟಿದ ಮೇಲೂ

ಬದಲಾಯಿತೇನು ಕಣ್ಣ ಹೊಳಪು
ಸಿಗದಾಯಿತೇನು ನನ್ನ ಗುರುತು
ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)