Song: Mukunda murari (ಮುಕುಂದ ಮುರಾರಿ), Movie: Mukunda Murari (ಮುಕುಂದ ಮುರಾರಿ)

ಹಾಡು: ಮುಕುಂದ ಮುರಾರಿ
ರಚನೆ: ವಿ. ನಾಗೇಂದ್ರ ಪ್ರಸಾದ್‌
ಸಂಗೀತ: ಅರ್ಜುನ್‌ ಜನ್ಯ
ಗಾಯನ: ಶಂಕರ್‌ ಮಹಾದೇವನ್‌
ಚಲನಚಿತ್ರ: ಮುಕುಂದ ಮುರಾರಿ

ನೀನೇ ರಾಮ, ನೀನೇ ಶಾಮ,
ನೀನೇ ಅಲ್ಲಾ, ನೀನೇ ಏಸು

ನೀನೇ ಕರ್ಮ, ನೀನೇ ಧರ್ಮ
ನೀನೇ ಮರ್ಮ, ನೀನೇ ಪ್ರೇಮ

ನಿಮ್ಮ ಜೀವದ ಮಾಲೀಕ ನಾನು
ನಿಮ್ಮ ಪಾಲಿನ ಸೇವಕ ನಾನು

ನನಗೇನು ಹೆಸರಿಲ್ಲ, ಹೆಸರಲ್ಲಿ ನಾನಿಲ್ಲ

ಕಣ ಕಣ ಕಣದೊಳಗೆ ಕುಳಿತಿರುವೆ

ಮುಕುಂದ ಮುರಾರೇ, ಮುಕುಂದಾ ಮುರಾರೇ(೨)

ನೀನೇ ರಾಮ, ನೀನೇ ಶಾಮ,
ನೀನೇ ಅಲ್ಲಾ, ನೀನೇ ಏಸು

ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲ್ಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ ಬೆವರಲ್ಲಿರುವೆ ನಾನು

ಕೆಲಸ ನಿನ್ನದೇ, ಫಲವು ನಿನ್ನದೇ, ಜಗದ ಒಡೆಯ ನೀನು
ಇದನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು 

ಬಿಡು ಮತಗಳ ಜಗಳ, ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ, ಇದೆ ಮಾರ್ಗವು ಸರಳ

ನನ್ನ ಸೇರಲು ದಾರಿಯು ನೂರು
ಅದಕೇತಕೆ ಈ ತಕರಾರು

ಅಣು ಅಣು ಅಣುವೊಳಗೆ ಕುಳಿತಿರುವೆ

ಮುಕುಂದ ಮುರಾರೇ, ಮುಕುಂದಾ ಮುರಾರೇ(೨)

ಯುಗದ ಯುಗದ, ಮೃಗದ ಖಗದ ಉಸಿರಲ್ಲಿರುವೆ ನಾನು
ಕಡಲ ಅಲೆಯ, ಮಳೆಯ ಹನಿಯ ಬರಮಾಡುವೆ ನಾನು

ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು 
ನನಗು ನಿನಗು ನಡುವೆ ನೀನೆ ಗೋಡೆ ಕಟ್ಟಿದವನು

ನಾ ಇರುವೆನು ಒಳಗೆ
ನೀ ಹುಡುಕಿದೆ ಹೊರಗೆ
ಬಿಚ್ಚು ಮದದಾ ಉಡುಗೆ, ನಡೆ ಬೆಳಕಿನ ಕಡೆಗೆ

ನಿಮ್ಮ ಜೀವದ ಮಾಲೀಕ ನಾನು
ನಿಮ್ಮ ಪಾಲಿನ ಸೇವಕ ನಾನು

ಕಣ ಕಣ ಕಣದೊಳಗೆ ನಾನಿರುವೆ

ಮುಕುಂದ ಮುರಾರೇ, ಮುಕುಂದಾ ಮುರಾರೇ(೨)

ನೀನೇ ರಾಮ, ನೀನೇ ಶಾಮ,
ನೀನೇ ಅಲ್ಲಾ, ನೀನೇ ಎಲ್ಲಾ







ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)