Song: Nee ekangiyaagamma (ನೀ ಏಕಾಂಗಿಯಾಗಮ್ಮ), Movie: Ekangi (ಏಕಾಂಗಿ)

ಹಾಡು:ನೀ ಏಕಾಂಗಿಯಾಗಮ್ಮ
ರಚನೆ: ವಿ. ರವಿಚಂದ್ರನ್‌
ಸಂಗೀತ: ವಿ. ರವಿಚಂದ್ರನ್‌
ಗಾಯನ: ಮಧು ಬಾಲಕೃಷ್ಣ
ಚಲನಚಿತ್ರ: ಏಕಾಂಗಿ

ನೀ ಏಕಾಂಗಿಯಾಗಮ್ಮ
ನೀ ಪ್ರೇಮಾಂಗಿಯಾಗಮ್ಮ

ನಿನ್ನ ನೀನು ಪ್ರೀತಿಸದೆ, ಕಾಣೋದು ಹೇಗೆ ಈ ಲೋಕಾನಾ
ನಿನ್ನ ನೀನು ಅರಿಯದೆ, ತಿಳಿಯೋದು ಹೇಗೆ ಈ ಲೋಕಾನಾ

ಲೋಕವೆ ನಿನ್ನೊಳಗೆ, ಏ, ನಿಸರ್ಗವೆ ನಿನ್ನೊಳಗೆ ಏ
ಏಕಾಂತವೇ ಓ ಸ್ವರ್ಗವೇ

ನೀ ಏಕಾಂಗಿಯಾಗಮ್ಮ
ನೀ ಪ್ರೇಮಾಂಗಿಯಾಗಮ್ಮ

ಕಣ್ಣು ಅರಳೋದು ಅರಳೊ ಹೂವಿನಾ, ಗುರುತಿಗೆ
ಉಸಿರು ಆಡೋದು, ನಾಡಿ ನುುಡಿಯೋದು ಸೂರ್ಯನ ಗುರುತಿಗೆ
ಹೃದಯವೇ ವಿಶಾಲವಾದ ಆಕಾಶವೇ

ಲೋಕವೆ ನಿನ್ನೊಳಗೆ, ಏ, ಸೌಂದರ್ಯವೆ ನಿನ್ನೊಳಗೆ ಏ
ಏಕಾಂತವೇ ಓ ಸ್ವರ್ಗವೇ

ನೀ ಏಕಾಂಗಿಯಾಗಮ್ಮ
ನೀ ಪ್ರೇಮಾಂಗಿಯಾಗಮ್ಮ

ಚಂದ್ರ ಮೂಡೋದು, ತಾರೆ ಮಿನುಗೋದು ನಗುವಿನಾ ಗುರುತಿಗೆ
ಹಗಲು ಇರುಳು ಮೂಡೋದು, ಹುಟ್ಟು-ಸಾವಿನ ಗುರುತಿಗೆ
ಕರಗುವಾ, ಮೋಡವೇ ಈ ಮನಸೂ

ಲೋಕವೆ ನಿನ್ನೊಳಗೆ, ಏ, ನಿನ್ನ ನೆರಳು ನಿನ್ನೊಳಗೆ ಏ
ಏಕಾಂತವೇ ಓ ಸ್ವರ್ಗವೇ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)