Song: O Myna O myna (ಓ ಮೈನಾ), Movie: Yajamana (ಯಜಮಾನ)

ಹಾಡು: ಓ ಮೈನಾ
ರಚನೆ: ಕೆ.ಕಲ್ಯಾಣ್‌
ಸಂಗೀತ: ರಾಜೇಶ್‌ ರಾಮನಾಥ್‌
ಗಾಯನ: ರಾಜೇಶ್‌ ಕೃಷ್ಣನ್‌, ಚಿತ್ರಾ
ಚಲನಚಿತ್ರ: ಯಜಮಾನ


ಓ ಮೈನಾ ಓ ಮೈನಾ, ಏನಿದು ಮಾಯೆ?
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ


ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ


ರಾಗ ಎನ್ನಲೇ? ಅನುರಾಗ ಎನ್ನಲೇ?
ಪ್ರೀತಿ ಎನ್ನಲೇ? ಹೊಸ ಮಾಯೆ ಎನ್ನಲೇ?! 


ಓ ಮೈನಾ ಓ ಮೈನಾ, ಏನಿದು ಮಾಯೆ?
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ



ಕಾವೇರಿ ತೀರದಲಿ, ಬರೆದೆನು ನಿನ್ಹೆಸರ
ಮರಳೆಲ್ಲ ಹೊನ್ನಾಯ್ತು, ಯಾವ ಮಾಯೆ?


ಬಿದಿರಿನ ಕಾಡಿನಲಿ, ಕೂಗಿದೆ ನಿನ್ಹೆಸರ
ಬಿದಿರೆಲ್ಲ ಕೊಳಲಾಯ್ತು, ಯಾವ ಮಾಯೆ?


ಸೂತ್ರವು ಇರದೇ, ಗಾಳಿಯು ಇರದೇ
ಬಾನಲಿ ಗಾಳಿ ಪಟವಾಗಿರುವೆ


ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ?


ಓ ಮೈನಾ ಓ ಮೈನಾ, ಏನಿದು ಮಾಯೆ?
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ



ಬೇಡನ ಕಣ್ಣಿಗೆ, ಬಾಣವ ನಾಟಿಸುವ
ಈ ಜಿಂಕೆ ಬೇಟೆ ಇಲ್ಲಿ, ಯಾವ ಮಾಯೆ?


ಹತ್ತಿಗೆ ಬೆಂಕಿಯನು, ಹತ್ತಿಸುವ ಮಾಯೆ
ಮೀನುಗಳೆ ಗಾಳ ಬೀಸೋ, ಯಾವ ಮಾಯೆ


ಆಕಾಶಕ್ಕೆ, ಬಲೆಯ ಬೀಸಿ
ಮೋಡ ನಗುವ ಮರ್ಮ ಏನೋ?


ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ?


ಓ ಮೈನಾ ಓ ಮೈನಾ, ಏನಿದು ಮಾಯೆ?
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ


ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ


ರಾಗ ಎನ್ನಲೇ? ಅನುರಾಗ ಎನ್ನಲೇ?
ಪ್ರೀತಿ ಎನ್ನಲೇ? ಹೊಸ ಮಾಯೆ ಎನ್ನಲೇ?!




Any other song you would like to see lyrics of? Just ask in the comments section below








ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)