100 th post. Song: Yaaru tiliyaru ninna (ಯಾರು ತಿಳಿಯರು ನಿನ್ನ), Movie: Babruvahana (ಬಬ್ರುವಾಹನ)

ಹಾಡು: ಯಾರು ತಿಳಿಯರು ನಿನ್ನ
ರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಟಿ.ಜಿ. ಲಿಂಗಪ್ಪ
ಗಾಯನ: ಪಿ. ಬಿ. ಶ್ರೀನಿವಾಸ್.‌ ಡಾ. ರಾಜಕುಮಾರ್
ಚಲನಚಿತ್ರ: ಬಬ್ರುವಾಹನ

ಬಬ್ರುವಾಹನ(ಬ), ಅರ್ಜುನ (ಅ)

ಬ: ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್‌ ಆರ್ಜಿಸಿದ, ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ

ಬ: ಹಗಲಿರುಳು ನೆರಳಂತೆ, ತಲೆಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು, ತೃಣಕ್ಕೆ ಸಮಾನ

ಅ: ಅಸಹಾಯ ಶೂರ, ನಾ, ಅಕ್ಷೀಣ ಬಲನೋ 
ಹರನೊಡನೆ ಹೋರಾಡಿ, ಪಾಶುಪಥವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳ ನಿಗ್ರಹಿಸೊ ವ್ಯಾಘ್ರನಿವನೋ, ಉಗ್ರಪ್ರತಾಪಿ

ಬ: ಓ ಹೊಹೊಹೊಹೊ, ಉಗ್ರಪ್ರತಾಪಿ

ಸಭೆಯೊಳಗೆ ದ್ರೌಪದಿಯ ಸೀರೆಯನು ಸೆಳೆವಾಗ
ಎಲ್ಲಿ ಅಡಗಿತ್ತೋ, ಈ ನಿನ್ನ ಶೌರ್ಯ 
ನೂಪುರಂಗಳ ಕಟ್ಟಿ, ನಟಿಸಿ ತಕಥೈ ಎಂದು
ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ
ಮಗನನ್ನು ಬಲಿಕೊಟ್ಟ ಭ್ರಷ್ಟ ನೀನು

ಗಂಡುಗಲಿಗಳ ಗೆಲ್ಲೋ, ಗುಂಡಿಗೆಯು ನಿನಗೆಲ್ಲೋ
ಖಂಡಿಸದೆ, ಉಳಿಸುವೆ, ಹೋಗೋ, ಹೋಗೆಲೊ ಶಿಖಂಡಿ

ಅ: ಫಡಫಡ ಶಿಖಂಡಿಯೆಂದಡಿಗಡಿಗೆ ನುಡಿಯಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತ ರಣಚಂಡಿಗೌತಣವೀವ ಈ ಗಾಂಡೀವಿ
ಗಂಡುಗಲಿಗಳ ಗಂಡ, ಉದ್ದಂಡ, ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ

ಬ: ಚಂಡನೋ, ಪ್ರಚಂಡನೋ, ಪುಂಡನೋ ನಿರ್ಧರಿಸುವುದು ರಣರಂಗ
ಹೂಡು ಬಾಣಗಳ, ಮಾಡುವೆ ಮಾನಭಂಗ

ಅ: ಕದನದೋಳ್‌ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ

ಬ: ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ

ಅ: ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ

ಬ: ಅಂತಕನಿಗೆ ಅಂತಕನು ಈ ಬಬ್ರುವಾಹನ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)