Song: Nannane kele nanna pranave (ನನ್ನಾಣೆ ಕೇಳೆ ನನ್ನ ಪ್ರಾಣವೇ), Movie: Ekangi (ಏಕಾಂಗಿ‌)

ಹಾಡು: ನನ್ನಾಣೆ ಕೇಳೆ ನನ್ನ ಪ್ರಾಣವೇ
ರಚನೆ: ವಿ. ರವಿಚಂದ್ರನ್‌
ಸಂಗೀತ: ವಿ. ರವಿಚಂದ್ರನ್‌
ಗಾಯನ: ಹರಿಹರನ್‌
ಚಲನಚಿತ್ರ: ಏಕಾಂಗಿ‌

ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರೂ ಬೇಕಿಲ್ಲವೇ

ಪ್ರೀತಿ ಕಣ್ಣು ತೆರೆದಾಗ, ಮರೆತ್ಹೋಯ್ತು ಲೋಕ
ಕನಸು ಕಣ್ಣು ಬಿಟ್ಟಾಗ, ಶುರು ಪ್ರೇಮಲೋಕ

ಇಲ್ಲಿ ನಾನು ನೀನು, ನೀನು ನಾನು ಇಬ್ಬರೇ
ಬೇರೆ ಯಾರೂ ಇಲ್ಲ ಕೇಳೇಲೇ

ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರೂ ಬೇಕಿಲ್ಲವೇ

ಹೂವು ಅರಳದ ಲೋಕ ಇದು, ಹೃದಯ ಅರಳೊ ಲೋಕ ಇದು
ಹಕ್ಕಿ ಹಾರದ ಲೋಕ ಇದು, ಪ್ರೇಮಿಗಳು ಹಾರೊ ಲೋಕ ಇದು

ಹಸಿರು ಇಲ್ಲ ಇಲ್ಲಿ, ಉಸಿರೇ ಎಲ್ಲಾ ಇಲ್ಲಿ
ಅಲೆಗಳು ಇಲ್ಲ ಇಲ್ಲಿ, ಆಸೆಗಳೇ ಎಲ್ಲಾ ಇಲ್ಲಿ
ನಾಳೆ ಅನ್ನೋ ಮಾತೇ ಇಲ್ಲ ಈ ಲೋಕದಲ್ಲಿ ಕೇಳೆಲೇ

ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರೂ ಬೇಕಿಲ್ಲವೇ

ಸೂರ್ಯನಿಲ್ಲದ ಲೋಕ ಇದು, ಚಂದ್ರನಿಲ್ಲದ ಲೋಕ ಇದು
ಸಮಯ ತಿರುಗದ ಲೋಕ ಇದು, ವೇಳೆ ಕಳೆಯದ ಲೋಕ ಇದು

ಒಂದೇ ಒಂದು ಕಥೆ ಇಲ್ಲಿ, ನನ್ನ ನಿನ್ನ ಕಥೆ ಇಲ್ಲಿ
ಒಂದೇ ಒಂದು ಸಾಲು ಇಲ್ಲಿ, ಪ್ರೇಮಕೆ ಸಾವು ಎಲ್ಲಿ
ಏಳು ಜನ್ಮ ಒಂದೇ ದಿನ ಈ ಲೋಕದಲ್ಲಿ ಕೇಳೆಲೇ

ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರೂ ಬೇಕಿಲ್ಲವೇ

ಪ್ರೀತಿ ಕಣ್ಣು ತೆರೆದಾಗ, ಮರೆತ್ಹೋಯ್ತು ಲೋಕ
ಕನಸು ಕಣ್ಣು ಬಿಟ್ಟಾಗ, ಶುರು ಪ್ರೇಮಲೋಕ

ಇಲ್ಲಿ ನಾನು ನೀನು, ನೀನು ನಾನು ಇಬ್ಬರೇ
ಬೇರೆ ಯಾರೂ ಇಲ್ಲ ಕೇಳೇಲೇ

ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರೂ ಬೇಕಿಲ್ಲವೇ

ಕಾಮೆಂಟ್‌ಗಳು

  1. ಪ್ರತ್ಯುತ್ತರಗಳು
    1. ತಾವು ಒಳ್ಳೆಯ ಸಾಹಿತ್ಯ ರಚಿಸಿದ್ದಾರೆ ದಯಮಾಡಿ ಹಂಚಿಕೊಳ್ಳಿ....ಇತರರ ಕೃತಿಯನ್ನು ನಿಂದಿಸಬೇಡಿ, ನಿಮಗೆ ಶೋಭೆ ತರುವುದಿಲ್ಲ

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)