Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

ಹಾಡು: ದೇಹವೆಂದರೆ ಓ ಮನುಜ

ರಚನೆ: ವಿ. ಮನೋಹರ್

ಸಂಗೀತ: ವಿ. ಮನೋಹರ್

ಗಾಯನ: ಡಾ. ರಾಜ್‌ಕುಮಾರ್‌

ಚಲನಚಿತ್ರ: ಜನುಮದ ಜೋಡಿ


ದೇಹವೆಂದರೆ ಓ ಮನುಜ,

ಮೂಳೆ ಮಾಂಸಗಳ ತಡಿಕೆ ನಿಜ

ಮನಸು ಆಸೆ ತುಂಬಿದ ಕಣಜ

ಮೋಹದಿಂದ ದುಃಖವು ಸಹಜ


ನಶ್ವರ ಕಾಯ ನಂಬದಿರಯ್ಯ

ಈಶ್ವರನೇ ಗತಿ ಮರೆಯದಿರಯ್ಯ

ತ್ಯಾಗದಿ ಪಡೆಯೋ ಸುಖವು ಶಾಶ್ವತ


ದೇಹವೆಂದರೆ ಓ ಮನುಜ,

ಮೂಳೆ ಮಾಂಸಗಳ ತಡಿಕೆ ನಿಜ

ಮನಸು ಆಸೆ ತುಂಬಿದ ಕಣಜ

ಮೋಹದಿಂದ ದುಃಖವು ಸಹಜ


ಕಟ್ಟಿರುವ ಗುಡಿಯಲ್ಲಿ, ಉಟ್ಟಿರುವ ಮಡಿಯಲ್ಲಿ

ಸುಟ್ಟ ಧೂಪ ದೀಪದಿ, ಶಿವನಿಲ್ಲ

ಬಗೆಬಗೆ ಮಂತ್ರದಲ್ಲಿ, ಯಾಗ ಯಜ್ಣಗಳಲ್ಲಿ

ಜಪ-ತಪ ವ್ರತದಲ್ಲಿ, ಅವನಿಲ್ಲ


ಮಣ್ಣ ಕಣಕಣದಲ್ಲು, ಜೀವ ಜೀವಗಳಲ್ಲು

ಒಳಗಿನ ಕಣ್ಣಿಗೆ ಕಾಣುವಾತನು


ದೇಹವೆಂದರೆ ಓ ಮನುಜ,

ಮೂಳೆ ಮಾಂಸಗಳ ತಡಿಕೆ ನಿಜ

ಮನಸು ಆಸೆ ತುಂಬಿದ ಕಣಜ

ಮೋಹದಿಂದ ದುಃಖವು ಸಹಜ


ಮೇಲು-ಕೀಳಿನ ನಡತೆ, ಹಾದಿ ತಪ್ಪಿದ ಜಡತೆ

ಕುಲ ವ್ಯಾಕುಲಗಳು ಸರಿಯೇನು

ರೋಷ ದ್ವೇಷದ ಉರಿಯು, ಲೋಭ ಮೋಸದ ಪರಿಯು

ಸಾಗುವ ದಾರಿಗೆ ಬೆಳಕೇನು


ಅನ್ಯರ ಗುಣದಿ ಸನ್ಮತಿ ಹುಡುಕು

ಸತ್ಯದ ಪಥವೇ ಬೆಳ್ಳಿ ಬೆಳಕು


ಕರುಣೆ ಪ್ರೇಮವೇ ಉಲ್ಲಾಸ, ನಿತ್ಯ ಕಾಯಕವೇ ಕೈಲಾಸ

ಚಿತ್ತ ನಿರ್ಮಲದಿ ಸಂತೋಷ, ನೀತಿ ಮಾರ್ಗವೇ ಭವನಾಶ


ವೈಭೋಗ ಜೀವನ ತ್ಯಾಗವ ಮಾಡಿ

ವೈರಾಗ್ಯ ಯೋಗದ ಸಾಧನೆ ಮಾಡಿ

ಕೈವಲ್ಯ ಹೊಂದುವ ಪರಮಸಂಪದ


ಕರುಣೆ ಪ್ರೇಮವೇ ಉಲ್ಲಾಸ, ನಿತ್ಯ ಕಾಯಕವೇ ಕೈಲಾಸ

ಚಿತ್ತ ನಿರ್ಮಲದಿ ಸಂತೋಷ, ನೀತಿ ಮಾರ್ಗವೇ ಭವನಾಶ



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)