Song: The Bengaluru Song (ದ ಬೆಂಗಳೂರು ಸಾಂಗ್), Movie: French Biriyani (ಫ್ರೆಂಚ್‌ ಬಿರಿಯಾನಿ)

ಹಾಡು: ದ ಬೆಂಗಳೂರು ಸಾಂಗ್‌

ರಚನೆ: ವಾಸುಕಿ ವೈಭವ್‌, ಅವಿನಾಶ್.‌ ಬಿ

ಸಂಗೀತ: ವಾಸುಕಿ ವೈಭವ್

ಗಾಯನ:‌ ಅದಿತಿ ಸಾಗರ್, ಮಾಧುರಿ, ವಾಸುಕಿ, ಗೋಕುಲ್‌, ಭರತ್

ಚಲನಚಿತ್ರ: ಫ್ರೆಂಚ್‌ ಬಿರಿಯಾನಿ



ಅತಿಥಿ ದೇವೋಭವ, ಅತಿಥಿ ದೇವೋಭವ (೨)


ನಮ ನಮ ನಮಸ್ತೆ, ಏನಿದು ಅವಸ್ಥೆ

ಬೇರೆ ಭಾಷೆ ಆಡೋ ಬಾಯಿ, ಆದರು ಕನ್ನಡವೇ ನಮ್‌ ತಾಯಿ

ಮನಸು ಒಡೆದ ತೆಂಗಿನ್‌ ಕಾಯಿ, ಟ್ರಾಫಿಕ್‌ ಜ್ಯಾಮಲ್‌ ಹೇಗೋ ಸಾಯಿ

ನಮ ನಮ ನಮಸ್ತೆ, ಏನಿದು ಅವಸ್ಥೆ


ಇದೇನು ಹಂಪಾ? ಇಲ್ಲ ಸಮಾಧಿನಾ?

ಯಾಕಿಷ್ಟು ರಂಪ, ಸ್ವಲ್ಪ ಸಮಾಧಾನ


ಸಾವ್ಧಾನ ಬೆಂದಕಾಳೂರು,

ಜಸ್ಟ್‌ ಹೋಲ್ಡ್‌ ಆನ್‌ ಓ ಬೆಂಗಳೂರು{೨}


ಅತಿಥಿ ದೇವೋಭವ, ಅತಿಥಿ ದೇವೋಭವ (೨)


ಅರೆ, ಅರೇ ಅವಸರವೇ ಅಪಘಾತಕ್ಕೆ ಕಾರಣ

ಪ್ರಾಣ-ಗೀಣ ಹೋದ್ರೆ ಇನ್ನೊಂದ್‌ ಎಲ್ಲಿಂದ ತರಣ

ಆಂಬ್ಯುಲನ್ಸ್‌ ಗೆ ಇಲ್ಲ ರೋಡು

ವಿ.ಐ.ಪಿ ನೇ ನಮ್ಮ ಗಾಡು


ಬೆಳ್ಗೆ ಸಂಜೆ ಸಿಲ್ಕ್‌ ಬೋರ್ಡು

ಐ.ಟಿ ಪಾಡು ನಾಯಿ ಪಾಡು


ಫ್ಲೈ-ಓವರ್‌ ಅಂಡರ್‌ ಪಾಸು

ಮೆಟ್ರೋ ಸತತ ಕಾಮಗಾರಿ

ಸ್ವಚ್ಛ ಭಾರತ ಆದ್ರೆ ಮನುಷ್ಯ ಮಾತ್ರ ಅಬ್ಬೇಪಾರಿ


ನೆನ್ನೆ ಭಿಕಾರಿ ಇವತ್‌ ಸಾವ್ಕಾರ

ಇದೇ ನೋಡಿ ಬೆಂಗಳೂರಿನ ಚಮತ್ಕಾರ


ನೀನ್‌ ಕೆಲ್ಸಕ್‌ ಬಂದ್ಯೋ, ಉಳ್ಸಕ್‌ ಬಂದ್ಯೋ

ಮೆರಿಯಕ್‌ ಬಂದ್ಯೋ, ತೆರಿಯಕ್‌ ಬಂದ್ಯೋ

ಕೂಡಿ ಕಳ್ದು ಗುಣ್ಸಿ ಭಾಗ್ಸಿ, ಕಿತ್ತೇನ್‌ ದಬ್ಬಾಕಕ್‌ ಬಂದ್ಯೋ


ಟೈಮಿಲ್ಲ ಯಾರ್ಗೂ ಇಲ್ಲಿ ಕೇಳಕ್‌ ನಿನ್ನ ಸಮಾಚಾರ

ಒಳ್ಳೇವ್ನಾಗಿದ್ರೆ ಮಾತ್ರ ಕಾದಿದೆ ಗ್ರಾಚಾರ


ಅತಿವೇಗ ತಿಥಿ ಬೇಗ, ಅರ್ಜೆಂಟ್‌ ಇನ್ಯಾತಕ್ಕೆ

ಹೆಲ್ಮೆಟ್‌ ಹಾಕ್ದೇ ಇದ್ರೆ ತಲೆ ಒಡ್ದೋಗೊ ಮಡಿಕೆ

ಡ್ರಿಂಕ್‌ ಅಂಡ್‌ ಡ್ರೈವು ಮಾಡ್ಲೇಬೇಡಿ ಗಾಡಿ ಸೈಡಲ್‌ ಬಿಡಿ

ಸೇಫಾಗ್‌ ಮನೆಗ್‌ ಬಿಡ್ತೀವ್‌ ತಾನೆ, ಒನ್‌ ಅಂಡ್‌ ಹಾಫು ಕೊಡಿ

ಒನ್‌ ಅಂಡ್‌ ಹಾಫು ಕೊಡಿ(೪),  ಕೊಡಿ



ದುಡ್ದಿದ್ದೆಲ್ಲ ಇ.ಎಂ.ಐ ಕಡೆಗೆ, 

ಜನಸಂಖ್ಯೆಗೆ ಸಾಕು ನಿಮ್ಮ ಕೊಡುಗೆ(೨)


ಅರೇ ಅರೇ ಫಟ್ಟೇ, ನಿಂಗೆ ಯಾಕೆ ಓಲಾ ಊಬರ್‌

ನಮ್ಮೂರ ಸುತ್ತೋಕೆ ಆಟೋ ಸೂಪರ್‌


ಗಲ್ಲಿ ಗಲ್ಲಿ ಗಿರ್ಕಿ ಹೊಡ್ಸಿ, ಹೊಟ್ಟೆ ತುಂಬಾ ಹೊಗೆ ಕುಡ್ಸಿ

ಬಾಡ್ಗೆ ಕೇಳದು, ವೇರ್‌ ಟು, ವೇರ್‌ ಫ್ರಮ್‌


ಸಾವ್ಧಾನ ಬೆಂದಕಾಳೂರು,

ಜಸ್ಟ್‌ ಹೋಲ್ಡ್‌ ಆನ್‌ ಓ ಬೆಂಗಳೂರು{೨}


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)