Song: Arere avala naguva (ಅರೆರೆ ಅವಳ ನಗುವ), Song: Sa. hi. pra. sha (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ)

ಹಾಡು: ಅರೆರೆ ಅವಳ ನಗುವ
ರಚನೆ: ತ್ರಿಲೋಕ್‌ ತ್ರಿವಿಕ್ರಮ
ಗಾಯನ: ವಾಸುಕಿ ವೈಭವ್‌
ಸಂಗೀತ: ವಾಸುಕಿ ವೈಭವ್‌
ಚಲನಚಿತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
 
ಅರೆರೆ ಅವಳ ನಗುವ, ನೋಡಿ ಮರೆತೆ ಜಗವ
ಹಗಲು ಗನಸು ಮುಗಿಸಿ, ಸಂಜೆ ಮೇಲೆ ಸಿಗುವ
 
ಮುಸ್ಸಂಜೆಗೆ ಹಾಡಾಗಲು ತಂಗಾಳಿಯ ತಯಾರಿ
ಸದ್ದಿಲ್ಲದೆ ಆ ಸೂರ್ಯನು ಬಾನಾಚೆಗೆ ಪರಾರಿ
 
ಅವಳೆದುರು ಬಂದಾಗ, ಎದೆಬಡಿತ ಜೋರಾಗಿ
ಕೂಗೊ, ಕೋಗಿಲೆ, ಮನದ ಮಾಮರಕೆ ಮರಳಿದೆ
ಮೈಕು ತರುವುದನೆ ಮರೆತಿದೆ
 
ಹಾಡು ಹಗಲೇನೆ ಬಾನಲಿ ಮೂನು ದಾರಿಯ ತಪ್ಪಿದೆ
ಈ ಹರೆಯವು ಬಳಿ ಬಂದರೆ ಬೋರ್ವೆಲ್ಲಿಗೂ ಬಾಯಾರಿಕೆ
ಈ ವಯಸಿದು ಕನಸೆಲ್ಲವ ನನಸಾಗಿಸೊ ಕೈಗಾರಿಕೆ
 
ಗಿದ ಮರವಾಗೊ ವರ ದೊರೆತಾಗ
ಬೆಟ್ಟ ಬಳಿಕರೆದು ಗುಟ್ಟು ಹೇಳಿದೆ, ಹೊಟ್ಟಯೊಳಗಿಂದ ಚಿಟ್ಟೆ ಹಾರಿದೆ
 
ಬಿಸಿಲೇರೊ ಟೈಮಲ್ಲಿ, ಬೀಸಿರಲು ತಂಗಾಳಿ
ತೇಲೊ, ಮೋಡವು, ಮೂಡು ಬಂದ ಕಡೆ ಓಡಿದೆ
ಗಾಳಿ ಮಾತನ್ನೆ ಕೇಳದೆ
 
ಓಡೊ ಕಾಲದ ಕಾಲಿಗೆ, ಕಾಲು ಗೆಜ್ಜೆಯ ಕಟ್ಟಿದೆ
ದಿನ ಶಾಲೆಗೆ ಲೇಟಾದರೂ, ತುಸುನಾಚುತ ತಲೆಬಾಚಿದ
ಕೊಳಪೆಟ್ಟಿಗೆ ಏಟಾದರೂ ನಸುನಾಚುತ ಕೈಚಾಚಿದ
 
ಎಳೆ ಹೃದಯಕ್ಕೆ ಮಳೆ ಸುರಿದಾಗ ಮೀಸೆ ಅಂಚಲ್ಲಿ ಆಸೆ ಚಿಗುರಿದೆ
ಬಂಚು ಬಂಚಾಗಿ ಕನಸು ಬಂದಿದೆ
ಕಿರುನಗೆಯ ತೇರನ್ನು, ಕಣ್ಣಲ್ಲೆ ಎಳೆವಾಗ
ರಾಶಿ, ಕಾಮನೆ, ಎದೆಯ ಬಾಗಿಲಿಗೆ ಬಂದಿದೆ
ಏನೂ ಸುಳಿವನ್ನೆ ನೀಡದೆ


 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)