Song: Hey dinakara (ಹೇ ದಿನಕರ), Movie: Om (ಓಂ)

ಹಾಡು: ಹೇ ದಿನಕರ

ರಚನೆ: ಹಂಸಲೇಖ

ಸಂಗೀತ: ಹಂಸಲೇಖ

ಗಾಯನ: ಡಾ. ರಾಜ್‌ಕುಮಾರ್‌

ಚಲನಚಿತ್ರ: ಓಂ


ಓಂ, ಓಂ

ಓಂ ಬ್ರಹ್ಮಾನಂದ ಓಂಕಾರ

ಆತ್ಮಾನಂದ ಸಾಕಾರ

ಓಂ ವೇದಾಂತರ್ಯ ಝೇಂಕಾರ

ಆಧ್ಯಾತ್ಮಾಭಿ ಮಧುಸಾರ 


ಹೇ ದಿನಕರ, ಶುಭಕರ, ಧರೆಗೆ ಬಾ

ಈ ಧರಣಿಯ ದೇಗುಲ ಬೆಳಗು ಬಾ

ನೀಗಿಸು ಬಾಳಿನ ಅಹಂ

ಅಹಂ, ಅಹಂ, ಅಹಂ, ಅಹಂ

ಮಾನಸ ಮಂದಿರ ತುಂಬು ಓಂಕಾರ ನಾದವೋ


ಓಂ ಬ್ರಹ್ಮಾನಂದ ಓಂಕಾರ

ಆತ್ಮಾನಂದ ಸಾಕಾರ

ಓಂ ವೇದಾಂತರ್ಯ ಝೇಂಕಾರ

ಆಧ್ಯಾತ್ಮಾಭಿ ಮಧುಸಾರ 


ನಗುವ ಮನಸೇ ಸಾಕು ನಮಗೆ

ಹಗಲುಗನಸೇ ಬೇಡ

ಮನೆಯ ತುಂಬ ಪ್ರೀತಿ ಸಾಕು

ಬೆಳ್ಳಿ ಚಿನ್ನ ಬೇಡ


ತಂದೆ ತಾಯೇ ದೈವ, ಗುರುವೆ ನಮ್ಮ ಜೀವ

ಎಂಬ ದಿವ್ಯ ಮಂತ್ರ, ನಮ್ಮ ಹೃದಯ ತುಂಬಿಸು


ಹೇ ದಿನಕರ, ಶುಭಕರ, ಧರೆಗೆ ಬಾ

ಈ ಧರಣಿಯ ದೇಗುಲ ಬೆಳಗು ಬಾ


ಸತ್ಯ ಹೇಳೋ ಕನ್ನಡಿಯಂತೆ

ಅಂತರಂಗ ಮಾಡು

ದಯೆ ತೋರೋ ಧರಣಿಯಂತ

ಮನೋಧರ್ಮ ನೀಡು


ನೊಂದ ಎಲ್ಲ ಜೀವ, ನನ್ನದೆಂಬ ಭಾವ

ಬಾಳಿನಲ್ಲಿ ತುಂಬೋ ವಿದ್ಯ ವಿನಯ ಕರುಣಿಸೋ


ಹೇ ದಿನಕರ, ಶುಭಕರ, ಧರೆಗೆ ಬಾ

ಈ ಧರಣಿಯ ದೇಗುಲ ಬೆಳಗು ಬಾ

ನೀಗಿಸು ಬಾಳಿನ ಅಹಂ

ಅಹಂ, ಅಹಂ, ಅಹಂ, ಅಹಂ

ಮಾನಸ ಮಂದಿರ ತುಂಬು ಓಂಕಾರ ನಾದವೋ


ಓಂ ಬ್ರಹ್ಮಾನಂದ ಓಂಕಾರ

ಆತ್ಮಾನಂದ ಸಾಕಾರ

ಓಂ ವೇದಾಂತರ್ಯ ಝೇಂಕಾರ

ಆಧ್ಯಾತ್ಮಾಭಿ ಮಧುಸಾರ 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)