Song: Shiva shiva (ಶಿವ, ಶಿವ) Movie: Purushottama (ಪುರುಷೋತ್ತಮ)

ಹಾಡು: ಶಿವ, ಶಿವ

ರಚನೆ: ಹಂಸಲೇಖ

ಸಂಗೀತ: ಹಂಸಲೇಖ

ಗಾಯನ: ಡಾ. ರಾಜ್‌ಕುಮಾರ್‌

ಚಲನಚಿತ್ರ: ಪುರುಷೋತ್ತಮ


ಶಿವ, ಶಿವ, ಇವ ಶಿವ(೨)

ಸದಾ, ಜಯ, ತೋಳಲ್ಲಿರುವ ಗಂಡು ಶಿವ

ನಯ, ಭಯ, ಬಾಳಲ್ಲಿರುವ ಗಂಡು ಶಿವ

ಹೇ, ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ


ಶಿವ, ಶಿವ, ಇವ ಶಿವ(೨)

ಸದಾ, ಜಯ, ತೋಳಲ್ಲಿರುವ ಗಂಡು ಶಿವ

ನಯ, ಭಯ, ಬಾಳಲ್ಲಿರುವ ಗಂಡು ಶಿವ

ಹೇ, ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ

ಶಿವ, ಶಿವ, ಇವ ಶಿವ(೨)


ಹಗಲು ರಾತ್ರಿ ದುಡಿದು ದುಡಿದು ದಣಿದು ಬಂದ ಹೃದಯಗಳಿಗೆ

ತಂಪನೆರೆವ ಸೇವಕ

ಬೆವರ ನೀರ ಹರಿಸಿ ಹರಿಸಿ ಬಳಲಿ ಬಂದ ಮನಸುಗಳಿಗೆ 

ಇಂಪನಿಡುವ ಗಾಯಕ


ಬಡತನದಲಿ ಬೆರೆಯುವೆ, ಸಿಹಿ ಕಹಿಯಲಿ ಉಳಿಯುವೆ

ಶ್ರಮಿಸುವ ರಸಋಷಿಗಳ ಜೊತೆ ಕುಣಿಯುತ ದಿನ ಕಳೆಯುವೆ


ದುಡುದು ದುಡುದು ಬಡವರಾದ ಕೆಲಸಗಾರ ಬಂಧುಗಳಿಗೆ

ನ್ಯಾಯ ಕೇಳೊ ನಾಯಕ

ಕನಸು ಕಂಡು ಕುರುಡರಾಗಿ ಕರುಣೆ ಬಯಸೊ ಕಾರ್ಮಿಕರಿಗೆ

ಉಸಿರು ನೀಡೊ ಮಾಂತ್ರಿಕ


ಕನಸುಗಳನು ತೆರೆಯುವೆ, ಮನಸುಗಳನು ನಗಿಸುವೆ

ಶ್ರಮಿಸುವ ರಸಋಷಿಗಳ ಜೊತೆ ಕುಣಿಯುತ ದಿನ ಕಳೆಯುವೆ

ಸದಾ, ಜಯ, ತೋಳಲ್ಲಿರುವ ಗಂಡು ಶಿವ

ನಯ, ಭಯ, ಬಾಳಲ್ಲಿರುವ ಗಂಡು ಶಿವ

ಹೇ, ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ

ಶಿವ, ಶಿವ, ಇವ ಶಿವ(೨)


ದಾಸ್ಯ ಹೋಗಿ ಹಸಿವು ಬಂತು ನಮ್ಮ ನಾಡ ಬಡವನೀಗ

ಒಂದು ಯಂತ್ರ ಮಾನವ

ಕೆಲಸ ಹೆಚ್ಚು ಕೂಲಿ ಕಡಿಮೆ ನಮ್ಮ ನಾಡ ಧನಿಕನೀಗ

ಒಬ್ಬ ಕ್ರೂರ ದಾನವ


ಬರಿ ಬವಣೆಯ ಬೆಳೆವರು, ಸಂಘಟನೆಯ ಮುರಿವರು

ಶ್ರಮಿಸುವ ಕಡುಗಲಿಗಳ ಕಥೆ ಕಂಬನಿಯಲಿ ಬರೆವರು


ಏನೆ ಇರಲಿ ಏನೆ ಬರಲಿ ನಮ್ಮ ಜನದ ಶಾಂತಿ ಸುಖದ

ಕಾಲವೊಂದು ಮುಂದಿದೆ

ತುಳಿತವಿರಲಿ, ಕೊರೆತವಿರಲಿ ನಮ್ಮ ಜಯದ ಬೆಳ್ಳಿದಿನದ

ಘಳಿಗೆ ಮುಂದೆ ಬರಲಿದೆ


ತೋಳ್ಬಲವನು ಬಳಸುವ, ತಾಯ್ನೆಲವನು ಉಳಿಸುವ

ತಿರುಗುವ ಭೂಮಂಡಲದಲಿ ನಮ್ಮ ಧ್ವಜವ ನಿಲಿಸುವ

ಸದಾ, ಜಯ, ತೋಳಲ್ಲಿರುವ ಗಂಡು ಶಿವ

ನಯ, ಭಯ, ಬಾಳಲ್ಲಿರುವ ಗಂಡು ಶಿವ

ಹೇ, ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ


ಶಿವ, ಶಿವ, ಇವ ಶಿವ

ಇವ ಶಿವ, ಶಿವ ಇವ

ಸದಾ, ಜಯ, ತೋಳಲ್ಲಿರುವ ಗಂಡು ಶಿವ

ನಯ, ಭಯ, ಬಾಳಲ್ಲಿರುವ ಗಂಡು ಶಿವ

ಹೇ, ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ

ಶಿವ





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)