Song: Naavaaduva nudiye (ನಾವಾಡುವ ನುಡಿಯೇ), Movie: Gandhada Gudi (ಗಂಧದ ಗುಡಿ)

ಈ ಕನ್ನಡದ ಬ್ಲಾಗ್‌ನ ೧೫೦ ನೇ ಹಾಡಾಗಿ ಕರ್ನಾಟಕ ರತ್ನ ಡಾ. ರಾಜಕುಮಾರರ ಅಭಿನಯದ ೧೫೦ನೇ ಚಿತ್ರ ʼಗಂಧದ ಗುಡಿʼಯ ಸಾರ್ವಕಾಲಿಕ ಶ್ರೇಷ್ಠ ಹಾಡನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇವೆ  


ಹಾಡು: ನಾವಾಡುವ ನುಡಿಯೇ

ರಚನೆ: ಚಿ. ಉದಯಶಂಕರ್

ಸಂಗೀತ: ರಾಜನ್-‌ ನಾಗೇಂದ್ರ

ಗಾಯನ:‌ ಪಿ. ಬಿ. ಶ್ರೀನಿವಾಸ್

ಚಲನಚಿತ್ರ: ಗಂಧದ ಗುಡಿ


ಆ ಆಹಾ ಆಹಾ ಆಹಹಾ, ಓಹೊಹೋ ಓಹೊಹೊಹೊಹೋ

ನಾವಾಡುವ ನುಡಿಯೇ ಕನ್ನಡ ನುಡಿ, ಚಿನ್ನದ ನುಡಿ, ಸಿರಿಗನ್ನಡ ನುಡಿ

ನಾವಿರುವ ತಾಣವೆ ಗಂಧದ ಗುಡಿ,  ಅಂದದ ಗುಡಿ, ಚೆಂದದಗುಡಿ

ನಾವಾಡುವ ನುಡಿಯೇ ಕನ್ನಡ ನುಡಿ,  ನಾವಿರುವ ತಾಣವೆ ಗಂಧದ ಗುಡಿ

ಅಂದದ ಗುಡಿ, ಗಂಧದ ಗುಡಿ, ಚೆಂದದ ಗುಡಿ, ಶ್ರೀಗಂಧದಗುಡಿ

ಆಹಹಾ ಆಹಹಾ ಆಹಹಾ, ಆಹಹಾ ಆಹಹಾ ಆಹಹಾ

 

ಹಸುರಿನ ಬನಸಿರಿಗೇ ಒಲಿದು, ಸೌಂದರ್ಯ ಸರಸ್ವತಿ ಧರೆಗಿಳಿದು

ಆಹಹಾ ಓಹೊಹೋ, ಹಾ ಆ,  ಓಓ

ಹರಿಯುವ ನದಿಯಲಿ ಈಜಾಡಿ, ಹೂಬನದಲಿ ನಲಿಯುತ ಓಲಾಡಿ

ಚೆಲುವಿನ ಬಲೆಯ ಬೀಸಿದಳು, ಈ ಗಂಧದ ಗುಡಿಯಲಿ ನೆಲೆಸಿದಳು

ಇದು ಯಾರ ತಪಸಿನ ಫಲವೋ! ಈ ಕಂಗಳು ಮಾಡಿದ ಪುಣ್ಯವೋ!

ಓ ಹೊ ಹೋ, ಹಾಆ

 

ನಾವಿರುವ ತಾಣವೆಗಂಧದ ಗುಡಿ

 

ಹಾ ಅಹಾ ಅಹಾ, ಆ ಆ ಆ ಅ ಅ, ಆ ಹ ಹ ಆ ಆ  

ಚಿಮ್ಮುತ ಓಡಿವೆ ಜಿಂಕೆಗಳು, ಕುಣಿದಾಡುತ ನಲಿದಿವೆ ನವಿಲುಗಳು

ಆಹಹಹಹಾ, ಮುಗಿಲನು ಚುಂಬಿಸುವಾಸೆಯಲಿ, ತೂಗಾಡುತ ನಿಂತ ಮರಗಳಲಿ

ಹಾಡುತಿರೆ ಬಾನಾಡಿಗಳು, ಎದೆಯಲ್ಲಿ ಸಂತಸದ ಹೊನಲು

ಇದು ವನ್ಯ ಮೃಗಗಳ ಲೋಕವೋ!  ಈ ಭೂಮಿಗೆ ಇಳಿದ ನಾಕವೋ! ಆಹಹಾ, ಹೋ ಓ 

 

ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೆ ಗಂಧದ ಗುಡಿ

ಅಂದದ ಗುಡಿ, ಗಂಧದ ಗುಡಿ, ಚೆಂದದ ಗುಡಿ ಶ್ರೀಗಂಧದಗುಡಿ

ಆಹಹಾ, ಆಹಹಾ, ಓ ಹೊ ಹೋ, ಓ ಹೊ ಹೋ, ಓಹೋ ಹೋ






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)