Song: Oduva nadi saagarava (ಓಡುವ ನದಿ ಸಾಗರವ), Movie: Bangaarada hoovu (ಬಂಗಾರದ ಹೂವು)

ಹಾಡು:‌ ಓಡುವ ನದಿ ಸಾಗರವ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್-‌ ನಾಗೇಂದ್ರ
ಗಾಯನ: ಪಿ. ಬಿ. ಶ್ರೀನಿವಾಸ್‌, ಪಿ. ಸುಶೀಲ
ಚಲನಚಿತ್ರ: ಬಂಗಾರದ ಹೂವು
 
 
ಓಡುವ ನದಿ ಸಾಗರವ ಬೆರೆಯಲೆಬೇಕು
ನಾನು ನೀನು ಎಂದಾದರು ಸೇರಲೆಬೇಕು
ಸೇರಿ ಬಾಳಲೆಬೇಕು, ಬಾಳು ಬೆಳಗಲೆಬೇಕು
 
ಹೃದಯ ಹಗುರಾಯಿತು, ಬದುಕು ಜೇನಾಯಿತು
ನಿನ್ನ ವಚನ ಹೊಸಬಾಳಿಗೆ ನಾಂದಿಯಾಯಿತು
 
ಓಡುವ ನದಿ ಸಾಗರವ ಬೆರೆಯಲೆಬೇಕು
ನಾನು ನೀನು ಎಂದಾದರು ಸೇರಲೆಬೇಕು
ಸೇರಿ ಬಾಳಲೆಬೇಕು, ಬಾಳು ಬೆಳಗಲೆಬೇಕು
 
 
ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು
ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು{೨}
 
ತಂಗಾಳಿ ಜೋಗುಳವ ಹಾಡಲಿಬೇಕು(೨)
ಬಂಗಾರದೆ ಹೂವೆ ನೀನು ನಗುತಿರಬೇಕು, ನನ್ನ ಜೊತೆಗಿರಬೇಕು
  
ಓಡುವ ನದಿ ಸಾಗರವ ಬೆರೆಯಲೆಬೇಕು
ನಾನು ನೀನು ಎಂದಾದರು ಸೇರಲೆಬೇಕು
ಸೇರಿ ಬಾಳಲೆಬೇಕು, ಬಾಳು ಬೆಳಗಲೆಬೇಕು
 
ನನ್ನ ಬಾಳ ನಗುವ ನಿನ್ನ ಮುಖದಿ ಕಾಣುವೆ
ಹರುಷದಲ್ಲಿ ದುಖದಲ್ಲಿ ಭಾಗಿಯಾಗುವೆ{೨}
 
ಎಲ್ಲಿ ಹೋದರಲ್ಲಿ ನಿನ್ನ ನೆರಳಾಗಿರುವೆ(೨)
ಬಳ್ಳಿ ಮರವ ಹಬ್ಬಿದಂತೆ ನಿನ್ನೊಡನಿರುವೆ, ಬಯಕೆ ಪೂರೈಸುವೆ
 
ಓಡುವ ನದಿ ಸಾಗರವ ಬೆರೆಯಲೆಬೇಕು
ನಾನು ನೀನು ಎಂದಾದರು ಸೇರಲೆಬೇಕು
ಸೇರಿ ಬಾಳಲೆಬೇಕು, ಬಾಳು ಬೆಳಗಲೆಬೇಕು
 
ಹೃದಯ ಹಗುರಾಯಿತು, ಬದುಕು ಜೇನಾಯಿತು
ನಿನ್ನ ವಚನ ಹೊಸಬಾಳಿಗೆ ನಾಂದಿಯಾಯಿತು
 
ಲಾಲಲಲ ಲಾಲಲಲ, ಲ ಲ ಲ ಲ ಲ
ಆ ಹಹಾ, ಲಾಲಲ, ಓ ಹೊಹೊ, ಲಲಲ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ninna Danigaagi (ನಿನ್ನ ದನಿಗಾಗಿ), Movie: Savaari 2 (ಸವಾರಿ 2)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)

Song: Ee hasiru siriyali (ಈ ಹಸಿರು ಸಿರಿಯಲಿ), Movie: Nagamandala (ನಾಗಮಂಡಲ)

Song: Ee nanna kannane (ಈ ನನ್ನ ಕಣ್ಣಾಣೆ), Movie: Abhi (ಅಭಿ)

Song: Nee Amruthadhare (ನೀ ಅಮೃತಧಾರೆ), Movie: Amruthadhare (ಅಮೃತಧಾರೆ)

Song: Jenina holeyo (ಜೇನಿನ ಹೊಳೆಯೋ), Movie: Chalisuva modagalu (ಚಲಿಸುವ ಮೋಡಗಳು)

Song: Neeralli sanna aleyondu (ನೀರಲ್ಲಿ ಸಣ್ಣ ಅಲೆಯೊಂದು). Movie: Hudugaru (ಹುಡುಗರು)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)