Song: Jagave ondu ranaranga (ಜಗವೆ ಒಂದು ರಣರಂಗ), Movie: Ranaranga (ರಣರಂಗ)

ಹಾಡು: ಜಗವೆ ಒಂದು ರಣರಂಗ

ರಚನೆ: ಹಂಸಲೇಖ

ಸಂಗೀತ: ಹಂಸಲೇಖ

ಗಾಯನ: ಡಾ. ರಾಜ್‌ಕುಮಾರ್‌

ಚಲನಚಿತ್ರ: ರಣರಂಗ


ಜಗವೇ ಒಂದು ರಣರಂಗ

ಧೈರ್ಯ, ಇರಲಿ ನಿನ್ನ ಸಂಗ 

ಬಾರೋ, ಬಾರೊ ನನ್ನ ರಾಜ

ನಿನಗೆ ನೀನೆ ಮಹಾರಾಜ 

ಹಿಡಿಯೋ, ಆತ್ಮಬಲದಸ್ತ್ರ

ಅದುವೆ, ಜಯದ ಮಹಾಮಂತ್ರ

ನಿನ್ನ ದಾರಿಯಲ್ಲಿ, ಎಲ್ಲೂ ಸೋಲೇ ಇಲ್ಲ

ಬಾಳ ಯುದ್ಧದಲ್ಲಿ ನಿನ್ನ ಗೆಲ್ಲೋರಿಲ್ಲ

ಛಲವೇ, ಬಲವೋ, ಮುಂದೆ ನುಗ್ಗಿ ನುಗ್ಗಿ ಬಾ


ಜಗವೇ ಒಂದು ರಣರಂಗ

ಧೈರ್ಯ, ಇರಲಿ ನಿನ್ನ ಸಂಗ 

ಬಾರೋ, ಬಾರೊ ನನ್ನ ರಾಜ


ತಿರುಗೋ ಭೂಮಿಯಲ್ಲಿ, ನಡೆವ ಬಾಳಿನಲ್ಲಿ

ಏನೂ ನಿಲ್ಲದಮ್ಮ ರಾಜ

ಜನನ ಎಂಬುದಿಲ್ಲಿ ಮರಣ ಎಂಬುದನ್ನ

ಎಂದೂ ಗೆಲ್ಲದಮ್ಮ ರಾಜ


ಜನ ಇರುವ ಗೋಲವೋ ಇದು

ದಿನ ಕಳೆವ ಜಾಲವೋ ಇದು

ಜಯ ಭಯದ ಚಿಂತೆ ಮಾಡದೆ

ಸೆಣಸಾಡೋ ರಂಗವೋ ಇದು


ಇಲ್ಲಿ ದಾನವರ ಕೆಟ್ಟ ಮಾಯವಿದೆ

ಇಲ್ಲಿ ಮಾನವರ ಸುಟ್ಟ ಗಾಯವಿದೆ

ಇದ್ದರೆ ಗೆದ್ದರೆ ನ್ಯಾಯವನ್ನು ಉಳಿಸು ಬಾ


ಜಗವೇ ಒಂದು ರಣರಂಗ

ಧೈರ್ಯ, ಇರಲಿ ನಿನ್ನ ಸಂಗ 

ಬಾರೋ, ಬಾರೊ ನನ್ನ ರಾಜ


ದೇಹೀ ಎನ್ನುವಾಗ ನಿದ್ದೆ ಮಾಡುವಾಗ 

ಕತ್ತಿ ಎತ್ತಬೇಡ ರಾಜ

ಶತ್ರು ಬೀಳುವಾಗ ಯುದ್ಧ ಮಾಡುವಾಗ

ಕರುಣೆ ಕಟ್ಟಿ ಇಡು ರಾಜ


ಭೂಮೀಲಿ ಹುಟ್ಟಿ ಬಂದರೆ

ಆ ಋಣವ ಕಟ್ಟಬೇಡವೇ

ಅನ್ಯಾಯ ಗೆಲ್ಲುತಿದ್ದರೆ

ಸಿಡಿದೆದ್ದು ನಿಲ್ಲಬೇಡವೇ


ಇಲ್ಲಿ ಕ್ರೂರತನ ಅಟ್ಟದಲ್ಲಿ ಇದೆ

ನಿನ್ನ ಜಾಣತನ ಮೆಟ್ಟುವಲ್ಲಿ ಇದೆ

ಮೆಟ್ಟು ಬಾ, ಅಟ್ಟು ಬಾ, ದಿಟ್ಟ ಹೆಜ್ಜೆ ಇಟ್ಟು ಬಾ


ಜಗವೇ ಒಂದು ರಣರಂಗ

ಧೈರ್ಯ, ಇರಲಿ ನಿನ್ನ ಸಂಗ 

ಬಾರೋ, ಬಾರೊ ನನ್ನ ರಾಜ

ನಿನಗೆ ನೀನೆ ಮಹಾರಾಜ 

ಹಿಡಿಯೋ, ಆತ್ಮಬಲದಸ್ತ್ರ

ಅದುವೆ, ಜಯದ ಮಹಾಮಂತ್ರ

ನಿನ್ನ ದಾರಿಯಲ್ಲಿ, ಎಲ್ಲೂ ಸೋಲೇ ಇಲ್ಲ

ಬಾಳ ಯುದ್ಧದಲ್ಲಿ ನಿನ್ನ ಗೆಲ್ಲೋರಿಲ್ಲ

ಛಲವೇ, ಬಲವೋ, ಮುಂದೆ ನುಗ್ಗಿ ನುಗ್ಗಿ ಬಾ


ಜಗವೇ ಒಂದು ರಣರಂಗ

ಧೈರ್ಯ, ಇರಲಿ ನಿನ್ನ ಸಂಗ 

ಬಾರೋ, ಬಾರೊ ನನ್ನ ರಾಜ


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)