Song: Hoovondu balibandu ( ಹೂವೊಂದು ಬಳಿಬಂದು), Movie: Shubhamangala(1975)
ಹಾಡು: ಹೂವೊಂದು ಬಳಿಬಂದು
ರಚನೆ: ವಿಜಯನಾರಸಿಂಹ
ಸಂಗೀತ: ವಿಜಯ ಭಾಸ್ಕರ್
ಗಾಯನ:ಆರ್. ಎನ್. ಸುದರ್ಶನ್
ಚಲನಚಿತ್ರ: ಶುಭಮಂಗಳ
ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ{೨}
ಕಾವೇರಿ ಸೀಮೆಯ ಕನ್ಯೆಯು ನಾನು
ಬೇಲೂರು ಬಾಲೆಯ ಪ್ರತಿನಿಧಿ ನಾನು
ತುಂಗೆಯ, ಭದ್ರೆಯ, ತುಂಗೆಯ ಭದ್ರೆಯ ತೌರಿನ ಹೂ ನಾನು, ತೌರಿನ ಹೂ ನಾನು
ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ
ಸೂರ್ಯನ ಕಾಂತಿಯ ಸುಂದರಿ ನಾನು
ತಿಂಗಳ ಬೆಳಕಿನ ತಂಗಿಯು ನಾನು
ಪ್ರೇಮದ, ಕಾವ್ಯಕೆ, ಪ್ರೇಮದ ಕಾವ್ಯಕೆ ಪೂಜೆಯ ಹೂ ನಾನು, ಪೂಜೆಯ ಹೂ ನಾನು
ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ
ಅರಿಶಿನ ಕುಂಕುಮ ಶೋಭಿತೆ ನಾನು
ವಧುವಿನ ಶೃಂಗಾರ ಭೂಷಿತೆ ನಾನು
ಮಂಗಳ, ಸೂತ್ರವ, ಮಂಗಳ ಸೂತ್ರವ ಬೇಡುವ ಹೂ ನಾನು, ಬೇಡುವ ಹೂ ನಾನು
ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ
ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ