Song: Eshtond jana (ಎಷ್ಟೊಂದ್‌ ಜನ), Movie: Chinnarimutta(ಚಿನ್ನಾರಿಮುತ್ತ)

ಹಾಡು:ಎಷ್ಟೊಂದ್‌ ಜನ
ರಚನೆ: ಎಚ್.‌ ಎಸ್.‌ ವೆಂಕಟೇಶ್‌ ಮೂರ್ತಿ
ಸಂಗೀತ: ಸಿ. ಅಶ್ವತ್ಥ್‌
ಗಾಯನ: ಬೇಬಿ ರೇಖ
ಚಲನಚಿತ್ರ: ಚಿನ್ನಾರಿಮುತ್ತ

ಎಷ್ಟೊಂದ್‌ ಜನ, ಇಲ್ಲಿ ಯಾರು ನನ್ನೋರು
ಎಷ್ಟೊಂದ್‌ ಮನೆ, ಇಲ್ಲಿ ಎಲ್ಲಿ ನಮ್ಮನೆ
ಎಲ್ಲಿ, ಎಲ್ಲಿ, ಎಲ್ಲಿ, ನಮ್ಮನೆ

ಎಷ್ಟೊಂದ್‌ ಜನ, ಇಲ್ಲಿ ಯಾರು ನನ್ನೋರು
ಎಷ್ಟೊಂದ್‌ ಮನೆ, ಇಲ್ಲಿ ಎಲ್ಲಿ ನಮ್ಮನೆ
ಎಲ್ಲಿ, ಎಲ್ಲಿ, ಎಲ್ಲಿ, ನಮ್ಮನೆ

ಮೂಟೆ ಹೊತ್ತೋರು, ಹೊತ್ತು ಮಂಡಿ ಸುತ್ತೋರು
ಇಟ್ಟಿಗೆ ಎತ್ತೋರು, ಎತ್ತಿ ಮಹಡಿ ಹತ್ತೋರು{೨}

ಚಿಂದಿ ಆಯೋರು, ಸಂದಿ ಗೊಂದಿ ಹಾಯೋರು(೨)

ಕಣ್ಣು ಮೂಗು ಕಾಣದ ಹಾಗೆ ಮಣ್ಣು ಮೆತ್ತಿದ ಅಣ್ಣ-ತಮ್ಮ

ಎಷ್ಟೊಂದ್‌ ಜನ, ಇಲ್ಲಿ ಯಾರು ನನ್ನೋರು
ಎಷ್ಟೊಂದ್‌ ಮನೆ, ಇಲ್ಲಿ ಎಲ್ಲಿ ನಮ್ಮನೆ
ಎಲ್ಲಿ, ಎಲ್ಲಿ, ಎಲ್ಲಿ, ನಮ್ಮನೆ

ಶಾಲೆಗ್‌ ಹೋಗೋರು, ಹಕ್ಕಿ ಹಾಗೆ ಹಾರೋರು
ಕನ್ನಡಿ ಕಣ್ಣೋರು, ಕಂಡದ್ದೆಲ್ಲ ತಿನ್ನೋರು{೨}

ಭಾರಿ ಕಾರೋರು, ಗಾಳಿ ಮೇಲೆ ತೇಲೋರು(೨)

ಕಣ್ಣು ಮೂಗು ಕಾಣದ ಕಪ್ಪು ಗಾಜಿನ ಮರೆಯ ಅಣ್ಣ-ತಮ್ಮ

ಎಷ್ಟೊಂದ್‌ ಜನ, ಇಲ್ಲಿ ಯಾರು ನನ್ನೋರು
ಎಷ್ಟೊಂದ್‌ ಮನೆ, ಇಲ್ಲಿ ಎಲ್ಲಿ ನಮ್ಮನೆ
ಎಲ್ಲಿ, ಎಲ್ಲಿ, ಎಲ್ಲಿ, ನಮ್ಮನೆ

ರೋಡಲ್ಲೋಡೋರು, ಮೇಲೆ ಎಲ್ಲೋ ನೋಡೋರು
ಒಂಟೆ ನಡೆಯೋರು, ಬಿಚ್ಚಿದ ಹೂವಿನ ಕೊಡೆಯೋರು{೨}

ಹರವಿದ ಮುಡಿಯೋರು, ಅರಿಯದ ಭಾಷೆ ನುಡಿಯೋರು(೨)

ಕಣ್ಣು ಮೂಗು ಕಾಣದ ಹಾಗೆ ಬಣ್ಣ ಮೆತ್ತಿದ ಅಕ್ಕ-ತಂಗಿ

ಎಷ್ಟೊಂದ್‌ ಜನ, ಇಲ್ಲಿ ಯಾರು ನನ್ನೋರು
ಎಷ್ಟೊಂದ್‌ ಮನೆ, ಇಲ್ಲಿ ಎಲ್ಲಿ ನಮ್ಮನೆ
ಎಲ್ಲಿ, ಎಲ್ಲಿ, ಎಲ್ಲಿ, ನಮ್ಮನೆ

ಒಣಕಲು ಮೈಯ್ಯೋರು, ಚಾಚಿದ ಸಣಕಲು ಕೈಯ್ಯೋರು
ಕೆದರಿದ ಜಡೆಯೋರು, ಎಂಜಲು ಮಡಿಲಲ್‌ ನಡೆಯೋರು
ಮಾಸಿದ ಕಣ್ಣೋರು, ಶಿವನೇ ಸಾಕು ಎನ್ನೋರು(೨)

ಕಣ್ಣು ಮೂಗು ಕಾಣದ ಹಾಗೆ ಮಣ್ಣು ಮೆತ್ತಿದ ಅಕ್ಕ-ತಂಗಿ

ಎಷ್ಟೊಂದ್‌ ಜನ, ಇಲ್ಲಿ ಯಾರು ನನ್ನೋರು
ಎಷ್ಟೊಂದ್‌ ಮನೆ, ಇಲ್ಲಿ ಎಲ್ಲಿ ನಮ್ಮನೆ
ಎಲ್ಲಿ, ಎಲ್ಲಿ, ಎಲ್ಲಿ, ನಮ್ಮನೆ{೨}

ಎಲ್ಲಿ, ಎಲ್ಲಿ, ಎಲ್ಲಿ, ನಮ್ಮನೆ(೩)


Eshtond Jana Illi Yaaru Nannoru
Eshtond Mane Illi Elii Nammane
Elli Elli Elli Nammane 
Eshtond Jana Illi Yaaru Nannoru
Eshtond Mane Illi Elii Nammane
Elli Elli Elli Nammane 
Moote Hotthoru Hoththu Mandi Suththoru
Ittige Eththoru Eththi Mahadi Haththoru|2|
Chindi Aayoru Sandi Gondi Hayoro |2|
Kannu Moogu Kaanada Haage, Mannu Meththida Anna Thamma
Eshtond Jana Illi Yaaru Nannoru
Eshtond Mane Illi Elii Nammane
Elli Elli Elli Nammane 
Shaaleg Hogoru Hakki Haage Haroru
Kannadi Kannoru Kandaddella Thinnoru |2|
Bhaari kaaroru Gaali Mele Theloru|2|
Kannu Moogu Kaanada Kappu
Gaajina Mareya Anna Thamma
Eshtond Jana Illi Yaaru Nannoru
Eshtond Mane Illi Elii Nammane
Elli Elli Elli Nammane 
Roadall odoru Mele yEllo Nodoru
Onte Nadeyoru Bichchida Hoovina Kodeyoru |2|
Haravida Mudiyoru Ariyada Baashe Nudiyoru |2|
Kannu Moogu Kaanada Haage, banna Meththida Akka Thangi
Eshtond Jana Illi Yaaru Nannoru
Eshtond Mane Illi Elii Nammane
Elli Elli Elli Nammane 
Onakalu Maiyyoru Chaachida Sanakalu Kaiyyoru
Kedarida Jadeyoru Enjal Madilal Nadeyoru(2)
Maasida Kannoru Shivane Saaku Ennoru (2)
Kannu Moogu Kaanada Haage banna Meththida Akka Thangi
Eshtond Jana Illi Yaru Nannoru
Eshtond Mane Illi Elii Nammane
Elli Elli Elli Nammane 












ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)