Ninnindale(ನಿನ್ನಿಂದಲೇ), Movie: Milana (ಮಿಲನ)
ಹಾಡು: ನಿನ್ನಿಂದಲೇ
ರಚನೆ: ಜಯಂತ್ ಕಾಯ್ಕಿಣಿ
ಸಂಗೀತ: ಮನೋಮೂರ್ತಿ
ಗಾಯನ: ಸೋನು ನಿಗಮ್
ಚಲನಚಿತ್ರ: ಮಿಲನ
ನಿನ್ನಿಂದಲೇ, ನಿನ್ನಿಂದಲೇ, ಕನಸೊಂದು ಶುರುವಾಗಿದೆ
ನಿನ್ನಿಂದಲೇ, ನಿನ್ನಿಂದಲೇ, ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ
ನಿನ್ನಿಂದಲೇ, ನಿನ್ನಿಂದಲೇ, ಕನಸೊಂದು ಶುರುವಾಗಿದೆ
ನಿನ್ನಿಂದಲೇ, ನಿನ್ನಿಂದಲೇ, ಮನಸಿಂದು ಕುಣಿದಾಡಿದೆ
ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೊ ನೋಡುವ ಪರಿ ಏನು
ಈ ಮಾಯೆಗೆ, ಈ ಮರುಳಿಗೆ, ನಿನ್ನಿಂದ ಕಳೆ ಬಂದಿದೆ
ನಿನ್ನಿಂದಲೇ, ನಿನ್ನಿಂದಲೇ, ಕನಸೊಂದು ಶುರುವಾಗಿದೆ
ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ
ಸೊಂಪಾದ ಚಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ
ಕಣ್ಣಿಂದಲೇ, ಸದ್ದಿಲ್ಲದೇ, ಮುದ್ದಾದ ಕರೆ ಬಂದಿದೆ
ನಿನ್ನಿಂದಲೇ, ನಿನ್ನಿಂದಲೇ, ಕನಸೊಂದು ಶುರುವಾಗಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ
ನಿನ್ನಿಂದಲೇ, ನಿನ್ನಿಂದಲೇ, ಕನಸೊಂದು ಶುರುವಾಗಿದೆ
ನಿನ್ನಿಂದಲೇ, ನಿನ್ನಿಂದಲೇ, ಮನಸಿಂದು ಕುಣಿದಾಡಿದೆ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ