Songe: Hoo malege (ಹೂ ಮಳೆಗೆ) Movie: Malgudi Days (ಮಾಲ್ಗುಡಿ ಡೇಸ್‌)

ಹಾಡು: ಹೂ ಮಳೆಗೆ
ರಚನೆ: ಕಿಶೋರ್‌ ಮೂಡಬಿದರಿ
ಸಂಗೀತ: ಗಗನ್‌ ಬಡೇರಿಯ
ಗಾಯನ: ಸಿದ್ಧಾರ್ಥ ಬೆಳ್ಮಣ್ಣು. ಶೃತಿ ಶಶಿಧರನ್‌
ಚಲನಚಿತ್ರ: ಮಾಲ್ಗುಡಿ ಡೇಸ್‌

ಹೂ ಮಳೆಗೆ, ಮನಸು ಮಾಗಿದೆ
ಈ ಧರೆಯ, ಚಲುವು ಮೀರಿದೆ
ಈ ಸ್ನೇಹ, ಸಿಹಿಯಿದೆ
ಮೌನದಲೂ ಮಾತಿದೆ

ಮಳೆಹನಿ, ಚಿಟಪಟ, ಮುಗಿಲ ಸ್ನೇಹನಾದ
ಮನಸನು, ಬೆಸೆಯುವ, ಮಳೆಯೇ ಒಂದು ವೇದ
ಕೊನೆಯ ಜನುಮ, ಸಿಗುವ ಪುಣ್ಯ 
ಒಲಿದ ಸ್ನೇಹ, ನಾನೇ ಧನ್ಯ

ನೀನಾಡೊ ಮಾತೆಲ್ಲ, ಮಳೆಯಂತೆ ಜಿನುಗಿ
ಮಧುವಾಗೆ ಮನದಲ್ಲಿ, ಹನಿಯಂತೆ ಮಿನುಗಿ

ನನ್ನೆಲ್ಲ ಕ್ಷಣಗಳಿಗೆ, ನೀನಿನ್ನು ಗೆಳೆಯ
ಕೊನೆವರೆಗು ಕಾಯುವೆನು ನಿನಗಾಗೆ ಹೃದಯ

ಸುರಿಯೆ ನೀ ಮಳೆಯೆ, ಮನದ ತೆರೆಯ ಸರಿಯೇ
ಧುಮುಕೇ ನೀ ಝರಿಯೇ, ಕೊಳಲ ನಾದ ಮರೆಯೇ

ಬರೆದಂತಹ ಪದಗಳಲಿ, ನಿನ ಖುಷಿಗಳೆ ಮೊದಲು
ಮಧುವಂತಹ ಈ ಸ್ನೇಹಕೆ, ಸರಿಗಮಗಳೆ ತೊದಲು

ಹೂ ಮಳೆಗೆ, ಮನಸು ಮಾಗಿದೆ
ಈ ಧರೆಯ, ಚಲುವು ಮೀರಿದೆ
ಈ ಸ್ನೇಹ, ಸಿಹಿಯಿದೆ
ಮೌನದಲೂ ಮಾತಿದೆ



Hoo maLEgE, manasu maagidE
ee dharEya, cheluvu meeridE
ee snEha, sihiyidE
Mounadalu maatidE

maLEhani chiTapaTa, mugila snEhanaada
Manasanu, bEsEyuva, maLEyE ondu vEda
konEya januma siguva puNya
olida sneha, naanE dhanya

neenaaDO maatElla, maLEyante jinugi 
MadhuvaagE manadalli, haniyantE minugi

NannElla kshaNagaLigE, neeninnu gELEya
KonEvarEgu kaayuvEnu, ninagaagE hrudaya

suriyE nee maLEYE, manada tErEya sariyE
dhumukE nee JhariyE, koLala naada mareyE

BarEdantaha padagaLali, nina KhushigaLE modalu
Madhuvantaha ee snEhakE, sarigamagaLE todalu 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)