nammoora mandaara hoove (ನಮ್ಮೂರ ಮಂದಾರ ಹೂವೆ), Movie: Aalemane( ಆಲೆಮನೆ-1981)

ಹಾಡು: ನಮ್ಮೂರ ಮಂದಾರ ಹೂವೆ
ರಚನೆ: ದೊಡ್ಡರಂಗೇಗೌಡ
ಸಂಗೀತ: ಅಶ್ವತ್ಥ್-‌ ವೈದಿ
ಗಾಯನ: ಎಸ್.‌ ಪಿ. ಬಾಲಸುಬ್ರಮಣ್ಯಂ
ಚಲನಚಿತ್ರ: ಆಲೆಮನೆ

ನಮ್ಮೂರ ಮಂದಾರ ಹೂವೆ, ನನ್ನೊಲುಮೆ ಬಾಂದಳದ ಚಲುವೆ
ಬಳಿಬಂದು ಬಾಳನ್ನು ಬೆಳಗು, ನನ್ನ ಬರಿದಾದ ಮನದಲ್ಲಿ ಮಿನುಗು {೨}

ನಮ್ಮೂರ ಮಂದಾರ ಹೂವೇ

ಕಣ್ಣಲ್ಲೆ ಕರೆದು , ಹೊಂಗನಸ ತೆರೆದು, ಸಂಗಾತಿ ಸಂಪ್ರೀತಿ ಸೆಳೆದೆ,
ಅನುರಾಗ ಹೊಳೆದು, ಅನುಬಂಧ ಬೆಳೆದು, ಸಮ್ಮೋಹ ಸಂಬಂಧ ಮಿಡಿದೆ

ಮೂಡಿದ, ಪ್ರೇಮದ, ಸೊಗಸಾದ ಕಾರಂಜಿ ಬಿರಿದೆ
ಸೊಗಸಾದ ಕಾರಂಜಿ ಬಿರಿದೆ

ನಮ್ಮೂರ ಮಂದಾರ ಹೂವೆ, ನನ್ನೊಲುಮೆ ಬಾಂದಳದ ಚಲುವೆ
ಬಳಿಬಂದು ಬಾಳನ್ನು ಬೆಳಗು, ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೆ

ಒಡಲಾಳ ಮೊರೆದು, ಒಡನಾಟ ಮೆರೆದು, ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ, ಹೊಸಗಾನ ತೋರಿ, ಹಿತವಾದ ಮಾಧುರ್ಯ ಮಿಂದೆ 

ತೀರದ, ಮೋಹದ, ಇನಿದಾದ ಆನಂದ ತಂದೆ, 
ಇನಿದಾದ ಆನಂದ ತಂದೆ

ನಮ್ಮೂರ ಮಂದಾರ ಹೂವೆ, ನನ್ನೊಲುಮೆ ಬಾಂದಳದ ಚಲುವೆ
ಬಳಿಬಂದು ಬಾಳನ್ನು ಬೆಳಗು, ನನ್ನ ಬರಿದಾದ ಮನದಲ್ಲಿ ಮಿನುಗು,
ಬರಿದಾದ ಮನದಲ್ಲಿ ಮಿನುಗು




ಕಾಮೆಂಟ್‌ಗಳು

  1. ಪ್ರತ್ಯುತ್ತರಗಳು
    1. ಈ ಹಾಡಿಗೆ ಸಂಬಂಧಿಸಿದಂತೆ ಅದರ ಅರ್ಥ ಅವನ ಮನಸಿನಲ್ಲಿ ಪ್ರೇಮ ಅರಳುವಾಗ ಅವಳ ಕುರಿತಾದ ಯೋಚನೆ ಸತತವಾಗಿ ಸಮುದ್ರದ ಶಬ್ದದಂತೆ ಭಾಸವಾಗುತ್ತದೆ.
      ಶಬ್ದಾರ್ಥ- ಮೊರೆತ ಎಂದರೆ ನಿಲ್ಲದ ಗುನುಗುವಿಕೆ/ಶಬ್ದ,

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ninna Danigaagi (ನಿನ್ನ ದನಿಗಾಗಿ), Movie: Savaari 2 (ಸವಾರಿ 2)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)

Song: Ee hasiru siriyali (ಈ ಹಸಿರು ಸಿರಿಯಲಿ), Movie: Nagamandala (ನಾಗಮಂಡಲ)

Song: Ee nanna kannane (ಈ ನನ್ನ ಕಣ್ಣಾಣೆ), Movie: Abhi (ಅಭಿ)

Song: Nee Amruthadhare (ನೀ ಅಮೃತಧಾರೆ), Movie: Amruthadhare (ಅಮೃತಧಾರೆ)

Song: Jenina holeyo (ಜೇನಿನ ಹೊಳೆಯೋ), Movie: Chalisuva modagalu (ಚಲಿಸುವ ಮೋಡಗಳು)

Song: Neeralli sanna aleyondu (ನೀರಲ್ಲಿ ಸಣ್ಣ ಅಲೆಯೊಂದು). Movie: Hudugaru (ಹುಡುಗರು)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)