nammoora mandaara hoove (ನಮ್ಮೂರ ಮಂದಾರ ಹೂವೆ), Movie: Aalemane( ಆಲೆಮನೆ-1981)
ಹಾಡು: ನಮ್ಮೂರ ಮಂದಾರ ಹೂವೆ
ರಚನೆ: ದೊಡ್ಡರಂಗೇಗೌಡ
ಸಂಗೀತ: ಅಶ್ವತ್ಥ್- ವೈದಿ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ
ಚಲನಚಿತ್ರ: ಆಲೆಮನೆ
ನಮ್ಮೂರ ಮಂದಾರ ಹೂವೆ, ನನ್ನೊಲುಮೆ ಬಾಂದಳದ ಚಲುವೆ
ಬಳಿಬಂದು ಬಾಳನ್ನು ಬೆಳಗು, ನನ್ನ ಬರಿದಾದ ಮನದಲ್ಲಿ ಮಿನುಗು {೨}
ನಮ್ಮೂರ ಮಂದಾರ ಹೂವೇ
ಕಣ್ಣಲ್ಲೆ ಕರೆದು , ಹೊಂಗನಸ ತೆರೆದು, ಸಂಗಾತಿ ಸಂಪ್ರೀತಿ ಸೆಳೆದೆ,
ಅನುರಾಗ ಹೊಳೆದು, ಅನುಬಂಧ ಬೆಳೆದು, ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ, ಪ್ರೇಮದ, ಸೊಗಸಾದ ಕಾರಂಜಿ ಬಿರಿದೆ
ಸೊಗಸಾದ ಕಾರಂಜಿ ಬಿರಿದೆ
ನಮ್ಮೂರ ಮಂದಾರ ಹೂವೆ, ನನ್ನೊಲುಮೆ ಬಾಂದಳದ ಚಲುವೆ
ಬಳಿಬಂದು ಬಾಳನ್ನು ಬೆಳಗು, ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೆ
ಒಡಲಾಳ ಮೊರೆದು, ಒಡನಾಟ ಮೆರೆದು, ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ, ಹೊಸಗಾನ ತೋರಿ, ಹಿತವಾದ ಮಾಧುರ್ಯ ಮಿಂದೆ
ತೀರದ, ಮೋಹದ, ಇನಿದಾದ ಆನಂದ ತಂದೆ,
ಇನಿದಾದ ಆನಂದ ತಂದೆ
ನಮ್ಮೂರ ಮಂದಾರ ಹೂವೆ, ನನ್ನೊಲುಮೆ ಬಾಂದಳದ ಚಲುವೆ
ಬಳಿಬಂದು ಬಾಳನ್ನು ಬೆಳಗು, ನನ್ನ ಬರಿದಾದ ಮನದಲ್ಲಿ ಮಿನುಗು,
ಬರಿದಾದ ಮನದಲ್ಲಿ ಮಿನುಗು
Idralli "Odalaala moredu" antha idyalla adara artha enu
ಪ್ರತ್ಯುತ್ತರಅಳಿಸಿಈ ಹಾಡಿಗೆ ಸಂಬಂಧಿಸಿದಂತೆ ಅದರ ಅರ್ಥ ಅವನ ಮನಸಿನಲ್ಲಿ ಪ್ರೇಮ ಅರಳುವಾಗ ಅವಳ ಕುರಿತಾದ ಯೋಚನೆ ಸತತವಾಗಿ ಸಮುದ್ರದ ಶಬ್ದದಂತೆ ಭಾಸವಾಗುತ್ತದೆ.
ಅಳಿಸಿಶಬ್ದಾರ್ಥ- ಮೊರೆತ ಎಂದರೆ ನಿಲ್ಲದ ಗುನುಗುವಿಕೆ/ಶಬ್ದ,