Song: Boni aagada hrudayana (ಬೋಣಿ ಆಗದ ಹೃದಯಾನ), Movie: Anna bond (ಅಣ್ಣ ಬಾಂಡ್)

ಹಾಡು: ಬೋಣಿ ಆಗದ ಹೃದಯಾನ

ರಚನೆ:‌ ಯೋಗರಾಜ್‌ ಭಟ್

ಸಂಗೀತ:‌ ವಿ. ಹರಿಕೃಷ್ಣ

ಗಾಯನ: ಟಿಪ್ಪು

ಚಲನಚಿತ್ರ:‌ ಅಣ್ಣ ಬಾಂಡ್

 

ಬೋಣಿ ಆಗದ ಹೃದಯಾನ, ಹೂವಿನಂಗ್ಡಿ ಮಾಡ್ಕೊಂಡು

ಕಸ್ಟಮರ್ರು ಹುಡುಕುವ ಕ್ಯಾಮೆ ಬೇಕಿತ್ತಾ?(ಬೇಕಿತ್ತಾ-೪)

ಅಪ್ಪಿ ತಪ್ಪಿ ನನ್ನನ್ನು, ಇವ್ಳು ಅಪ್ಪಿಕೊಂಡಾಗ

ಒಳ್ಳೇವ್ನಾಗೇ ಉಳ್ಕೊಳ್ಳೋ, ಕ್ಯಾಮೆ ಬೇಕಿತ್ತಾ?(ಬೇಕಿತ್ತಾ-೪)

 

ಓಡಿ ಹೋಗೋ ಹೃದಯಕ್ಕೊಂದು ಬ್ರೇಕು ಬೇಕಿತ್ತಾ

ಇವ್ಳ ನೋಡೋದಕ್ಕೆ ಒಂದು ಎಕ್ಸ್ಟ್ರಾ ಕಣ್ಣು ಬೇಕಿತ್ತಾ

ಚನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇಬೇಕಿತ್ತಾ?

 

ಬೋಣಿ ಆಗದ ಹೃದಯಾನ, ಹೂವಿನಂಗ್ಡಿ ಮಾಡ್ಕೊಂಡು

ಕಸ್ಟಮರ್ರು ಹುಡುಕುವ ಕ್ಯಾಮೆ ಬೇಕಿತ್ತಾ?

 

ತಂಗಾಳಿನ ತಬ್ಕೊಂಡು, ನೂರು ಮುತ್ತು ಕೊಟ್ಕೊಂಡು

ಮೈಕೈ ನೋವು ಮಾಡಿಕೊಂಡ ನಾನು ಲೂಜ಼ಾ

ಹಿಂಗೇ ಇದ್ರೆ ಯೂಸಾಗಲ್ಲ ನಾಲ್ಕು ಪೈಸಾ

 

ಪ್ರೀತಿಯೊಂದು ತಣ್ಣೀರು, ಜಾಸ್ತಿ ಆದ್ರೆ ಬಿಸಿ ನೀರು

ಕುಡಿದು ನೋಡ್ಲಾ ಸ್ನಾನಾ ಮಾಡ್ಲಾ ಯಾರಾನಾ ಹೇಳಿ

ವಯಸ್ಸಿನಲ್ಲಿ ಕನ್‌ಪ್ಯೂಷನ್ನು ತುಂಬಾ ಮಾಮೂಲಿ 

 

ಒಂಟಿ ಪಿಟೀಲು ಅಳ್ತಾ ಇದ್ರೆ ಎಂಥಾ ಸಂಗೀತ

ಬೇಡ ಅಂದ್ರೂ ಬೀಳೋ ಕನಸಿಗೊಂದು ಕ್ಯಾಮರಾ ಬೇಕಿತ್ತಾ

ಚನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇಬೇಕಿತ್ತಾ?

 

ಬೋಣಿ ಆಗದ ಹೃದಯಾನ, ಹೂವಿನಂಗ್ಡಿ ಮಾಡ್ಕೊಂಡು

ಕಸ್ಟಮರ್ರು ಹುಡುಕುವ ಕ್ಯಾಮೆ ಬೇಕಿತ್ತಾ?

 

ಗಂಡು ನವಿಲಿಗೆ ಮಾತ್ರಾನೇ, ಪುಕ್ಕ ಕೊಟ್ಟ ಭಗವಂತ

ಕುಣಿಯೋ ಕೆಲ್ಸ ಗಂಡಸರಿಗೆ ಹೇಳಿ ಮಾಡ್ಸಿದ್ದು

ಹೆಣ್ಣು ಮಕ್ಳು ಕುಣಿಸೋದಕ್ಕೆ ವರ್ಲ್ಡು ಫೇಮಸ್ಸು

 

ಫೀಲಿಂಗಲ್ಲಿ ಒಮ್ಮೊಮ್ಮೆ, ವೈನು ಶಾಪಿನ ಮುಂದೇನೆ

ನಡ್ಕೊಂಡ್‌ ಹೋದ್ರೂ ಹಿಡ್ಕೋತಾರೆ ನೈಟು ಪೋಲೀಸು

ಯಾವನಿಗೆ ಬೇಕು ಸ್ವಾಮಿ ಪ್ರೀತಿ ತಪಸ್ಸು

 

ಎಲ್ಲಾ ಇದ್ರೂ ಕೂಡ ನಮ್ದು ಖಾಲಿ ಏಕಾಂತ

ಇನ್ನು ಬಿಟ್ರೆ ಶುರುವಾಗುತ್ತೆ ನಮ್ಮ ಪೋಲಿ ವೇದಾಂತ

ಚನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇಬೇಕಿತ್ತಾ?

 

ಸೂರ್ಯ ಮುಳುಗೋ ಟೈಮಲ್ಲಿ, ಇವ್ಳು ಕುಂತು ಹೋದಂತ

ಬೆಂಚು ಮುಟ್ಟಿ ನೋಡುವ ಕ್ಯಾಮೆ ಬೇಕಿತ್ತಾ?

 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)