Song: Kannale bachidala (ಕಣ್ಣಲೇ ಬಚ್ಚಿಡಲಾ), Movie: Ambareesha (ಅಂಬರೀಶ)

ಹಾಡು: ಕಣ್ಣಲೇ ಬಚ್ಚಿಡಲಾ

ರಚನೆ: ವಿ.ನಾಗೇಂದ್ರ ಪ್ರಸಾದ್

ಸಂಗೀತ:‌ ವಿ. ಹರಿಕೃಷ್ಣ

ಗಾಯನ: ಶ್ರೇಯ ಘೋಶಾಲ್‌

ಚಲನಚಿತ್ರ: ಅಂಬರೀಶ


ಕಣ್ಣಲೇ ಬಚ್ಚಿಡಲಾ? ನನ್ನಲೇ ಮುಚ್ಚಿಡಲಾ?

ಹೇಗಪ್ಪ ಕಾಪಾಡಲಿ?

ಚಿನ್ನದಂಥ ಹುಡುಗ, ನನ್ನೋನು

ನನ್ನ ಬಳಗ ಇವನು, ಗೊತ್ತೇನು?

ನಂದೇ ದೃಷ್ಟಿ ಏನು


ಹೇ ಚಿನ್ನಾ…

ಮುಚ್ಚಿಟ್ಟರು ಬಚ್ಚಿಟ್ಟರು ನಿನ್ನೊಳಗೆ ಹಾಯಾಗಿರುವೇ

ಹೇ ಚಿನ್ನಾ…

ನಾನೆಂದಿಗೂ ನಿನ್ನೊಲವಿಗೆ ನಂಬಿಕೆಯ ನೆರಳಾಗಿರುವೆ

ಬೊಂಬೆಯಂಥ ಹುಡುಗಿ, ನನ್ನೋಳು

ಹಾಲು-ಜೇನು ಮನಸು, ಗೊತ್ತೇನು?

ನಂದೇ ದೃಷ್ಟಿ ಏನು



ಹೋ, ಬಂದೇ ಬರುವ ಎಂದು, ಪ್ರೇಮಿಗಾಗಿ ಕಾಯೋ ಆತಂಕ ಹೆಚ್ಚಲ್ಲವಾ?

ಬಂದ ಮೇಲೆ ಇವನ ತಬ್ಬಿಕೊಂಡ್ರೆ ನನ್ನ ಆಯಸ್ಸು ಹೆಚ್ಚಲ್ಲವಾ?


ದಿನಾನು ಇವನ ಕನಸೇ ಬಂದ್ರೆ ಏನು ಮಾಡಲಿ?

ಅಲ್ಲೂನು ಇವನ ಸ್ಪರ್ಶ ಸುಖವ ಹೇಗೆ ತಾಳಲಿ?


ಓ ಚಿನ್ನಾ…

ಕನಸಲ್ಲಿಯೂ ನನಸಲ್ಲಿಯೂ ನಿನ್ನ ನೆನಪಲ್ಲೇ ಇರುವೇ

ಓ ಚಿನ್ನಾ…

ನಿನ್ನೊಲವಿನ ಮಳೆಬಿಲ್ಲಿಗೆ ರಂಗನ್ನು ತುಂಬಿಕೊಡುವೆ

ಬೊಂಬೆಯಂಥ ಹುಡುಗಿ, ನನ್ನೋಳು

ಹಾಲು-ಜೇನು ಮನಸು, ಗೊತ್ತೇನು?

ನಂದೇ ದೃಷ್ಟಿ ಏನು



ನನ್ನ ಉಸಿರ ಒಳಗೆ ನಡೆದ ಏರು-ಪೇರು ಹೇಳಲು ಆಗುವುದೇ?

ನನ್ನ ಹಣೆಯ ಬೆವರ ಹನಿಯ ಸಾಲು ಕೂಡ ಇವನ್ಹೆಸರ ಗೀಚುತ್ತಿದೆ

 

ಗುಲಾಬಿ ಹೂವ ಸೋಕಿದಂತೆ ನನ್ನ ತಾಕುವ

ಪ್ರಮಾಣ ಮಾಡಿ ಹೇಳುತೀನಿ ಪ್ರೇಮವೇ ಇವ


ಓ ಚಿನ್ನಾ… 

ಇಂದಾದರು ಮುಂದಾದರು ನಿನ್ನೊಲವಿಗೆ ಉಸಿರಾಗಿರುವೆ

ಬಾ ಚಿನ್ನಾ… 

ಈ ಜನ್ಮಕು ಮರುಜನ್ಮಕು ನಿನ್ಹೆಸರಿಗೆ ಜೊತೆಯಾಗಿರುವೆ

ಬೊಂಬೆಯಂಥ ಹುಡುಗಿ, ನನ್ನೋಳು

ಹಾಲು-ಜೇನು ಮನಸು, ಗೊತ್ತೇನು?

ನಂದೇ ದೃಷ್ಟಿ ಏನು


ಹೋ,  ಕಣ್ಣಲೇ ಬಚ್ಚಿಡಲಾ? ನನ್ನಲೇ ಮುಚ್ಚಿಡಲಾ?

ಹೇಗಪ್ಪ ಕಾಪಾಡಲಿ?

ಚಿನ್ನದಂಥ ಹುಡುಗ, ನನ್ನೋನು

ನನ್ನ ಬಳಗ ಇವನು, ಗೊತ್ತೇನು?

ನಂದೇ ದೃಷ್ಟಿ ಏನು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)